
ಲಕ್ನೋ(ಡಿ.16): ಭಾರತ ಹಾಕಿ ತಂಡದ ಕೋಚ್ ರೋಲ್ಯಾಂಟ್ ಓಲ್ಟಮನ್ಸ್ ಅವರ ಅಭ್ಯಾಸ ಶಿಬಿರಕ್ಕೆ ಆಟಗಾರರು ತಡವಾಗಿ ಹೋದರೆ 500 ರೂಗಳ ದಂಡವನ್ನು ತೆರಬೇಕಾಗಿದೆ. ಆಟಗಾರರಲ್ಲಿ ಶಿಸ್ತನ್ನು ಮೂಡಿಸುವ ಸಲುವಾಗಿ ಓಲ್ಟಮನ್ಸ್ ಈ ಕ್ರಮಕ್ಕೆ ಮುಂದಾಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಪೈಸೆ ಪೈಸೆಗೂ ಲೆಕ್ಕ ಹಾಕುವ ಸ್ಥಿತಿ ಇದೆ. ಇಂತಹದ್ದರಲ್ಲಿ ಓಲ್ಟಮನ್ಸ್ ಆಟಗಾರರ ಅಶಿಸ್ತಿಗೆ ದಂಡ ಹೇರುತ್ತಿದ್ದಾರೆ. ಇದು ಅಭ್ಯಾಸಕ್ಕೆ ಮಾತ್ರ ಸಿಮೀತವಾಗಿಲ್ಲ. ಹಾಕಿ ಆಟಗಾರರು ಭಾಗವಹಿಸುವ ಸಂಸ್ಥೆಯ ಕಾರ್ಯಕ್ರಮಗಳಲ್ಲೂ ಈ ಕ್ರಮ ಅನ್ವಯವಾಗುತ್ತಿದೆ.
ಓಲ್ಟಮನ್ಸ್ ಅವರ ಶಿಸ್ತುಬದ್ಧ ಕೋಚ್‌ನಿಂದಾಗಿ ಭಾರತ ಹಾಕಿ ತಂಡ ಸದ್ಯ ವಿಶ್ವ ಶ್ರೇಯಾಂಕದಲ್ಲಿ 6ನೇ ಸ್ಥಾನ ಪಡೆದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.