
ಕೆಪಿಎಲ್ ಫೈನಲ್ ಪಂದ್ಯಗಳ ಇತಿಹಾಸದಲ್ಲೇ ದೊಡ್ಡ ಮೊತ್ತ ದಾಖಲಿಸಿದ ಬಳ್ಳಾರಿ ಟಸ್ಕರ್ಸ್ ಹುಬ್ಬಳ್ಳಿಯ ರಾಜ್‌ನಗರ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 35 ರನ್‌ಗಳ ಅಂತರದಿಂದ ಜಯ ಸಾಸುವ ಮೂಲಕ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಕಳೆದ ಬಾರಿ ಫೈನಲ್ ಸೋಲನುಭವಿಸಿದ್ದ ಹುಬ್ಬಳ್ಳಿ ತಂಡ ಸತತ ಎರಡನೇ ಬಾರಿ ಪ್ರಶಸ್ತಿಯಿಂದ ವಂಚಿತವಾಗಬೇಕಾಯಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಳ್ಳಾರಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ಮೂಲಕ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 189 ರನ್‌ಗಳ ದಾಖಲೆ ಮೊತ್ತ ಕಲೆ ಹಾಕಿತ್ತು. ನಂತರ 190 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಹುಬ್ಬಳ್ಳಿ ತಂಡ 9 ವಿಕೆಟ್ ಕಳೆದುಕೊಂಡು ರನ್ ಕಲೆ ಹಾಕಲು ಮಾತ್ರ ಸಾಧ್ಯವಾಯಿತು.
ಬಿರುಸಿನ ಬ್ಯಾಟಿಂಗ್‌ಗೆ ಮುಂದಾದ ಆತಿಥೇಯ ಬ್ಯಾಟ್ಸ್‌ಮನ್‌ಗಳು ಬಳ್ಳಾರಿ ಮಾರಕ ಬೌಲಿಂಗ ದಾಳಿಗೆ ತತ್ತರಿಸುವ ಮೂಲಕ ಕೇವಲ 17 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿ, ನಂತರ ಲಗುಬಗನೆ ವಿಕೆಟ್ ಕಳೆದುಕೊಂಡಿದ್ದು ಸೋಲಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ದಿಕ್ಷಾಂಶು ನೇಗಿ (39), ಆರಂಭಿಕ ಆಟಗಾರ ಮೊಹ್ಮದ ತಾಹ (36) ಮತ್ತು ಅಗ್ರ ಕ್ರಮಾಂಕದಲ್ಲಿ ಕುನಾಲ್ ಕಪೂರ್ (27) ರನ್ ಗಳಿಸಿದ್ದು ತಂಡ 150 ರನ್‌ಗಳ ಗಡಿ ದಾಟಲು ನೆರವಾಯಿತು.
ಬಳ್ಳಾರಿ ದೊಡ್ಡ ಮೊತ್ತ: ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಬಳ್ಳಾರಿ ತಂಡದ ಆರಂಭಿಕ ಆಟಗಾರ ರೋಹನ್ ಕದಮ್ (61) ಮತ್ತು ಬಾಲಚಂದ್ರ ಅಖಿಲ್ (50) ಸೊಓಂೀಟಕ ಬ್ಯಾಟಿಂಗ್ ಪ್ರದರ‌್ಶಿಸುವುದರೊಂದಿಗೆ 5 ವಿಕೆಟ್ ಕಳೆದುಕೊಂಡು 189 ರನ್‌ಗಳ ದಾಖಲೆ ಮೊತ್ತ ಕಲೆ ಹಾಕಿತ್ತು. ಕಾರಣ ಈ ಮುನ್ನ 2014ರಲ್ಲಿ ಬೆಳಗಾವಿ ವಿರುದ್ಧ ಮೈಸೂರ್ ವಾರಿಯರ್ಸ್ ಕಲೆ ಹಾಕಿದ್ದೇ ಕೆಪಿಎಲ್ ಫೈನಲ್ ಪಂದ್ಯದಲ್ಲಿ ದೊಡ್ಡ ಮೊತ್ತವಾಗಿತ್ತು.
ಆರಂಭದಲ್ಲಿ ತಂಡ ಇನ್ನೂ ಕೇವಲ 7 ರನ್ ಗಳಿಸುತ್ತಿದ್ದಂತೆಯೇ ಕೆ.ಬಿ. ಪವನ್ (1) ರನೌಟ್ ಆಗಿದ್ದು ತಂಡಕ್ಕೆ ಆರಂಭಿಕ ಆಘಾತ ಕಂಡಿತ್ತು. ಆದರೆ, ನಂತರ ಬಂದ ಸುನೀಲ್ ರಾಜು (36) ರೋಹನ್ ಕದಂಗೆ ತಕ್ಕ ಸಾಥ್ ನೀಡುವ ಮೂಲಕ ಇಬ್ಬರ ಜತೆಯಾಟದಲ್ಲಿ 83 ರನ್ ಕಲೆ ಹಾಕುತ್ತಿದ್ದಂತೆಯೇ ಸುನೀಲ್ ರಾಜು 11ನೇ ಓವರ್‌ನ ಶಿವಿಲ್ ಕೌಶಿಕ್ 2ನೇ ಎಸೆತೆದಲ್ಲಿ ಕುನಾಲ್ ಕಪೂರ್‌ಗೆ ಕ್ಯಾಚ್ ನೀಡಿ ಹೊರ ನಡೆದರು. ರೋಹನ್ ಕದಮ್ ಅರ‌್ಧ ಶತಕದಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. ಸುನಿಲ್ ಮೊತ್ತದಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸೇರಿದ್ದವು. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಬಾಲಚಂದ್ರ ಅಖಿಲ್ (50) 24 ಎಸೆತಗಳನ್ನು ಎದುರಿಸಿ ಅರ‌್ಧ ಶತಕ ಪೂರೈಸಿದಾಗ, ತಂಡ 200 ರನ್‌ಗಳ ಗಡಿ ದಾಟುವ ಸೂಚನೆ ನೀಡಿತ್ತು. ಆದರೆ, ಅಂತಿಮ ಓವರ್‌ಗಳಲ್ಲಿ ಬಳ್ಳಾರಿ ಬ್ಯಾಟ್ಸ್‌ಮನ್‌ಗಳು ಬಿರುಸಿನ ಆಟಕ್ಕೆ ಮುಂದಾಗಲಿಲ್ಲ. ಬಾಲಚಂದ್ರ ಅರ್ಧ ಶತಕದಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ಸೇರಿದ್ದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.