ಚೀನಾದ ಹಣದ ಹೊಳೆಗೆ ವಿಶ್ವದ ಘಟಾನುಘಟಿ ಫುಟ್ಬಾಲಿಗರು ಕೊಚ್ಚಿ ಹೋಗಲಿದ್ದಾರಾ?

Published : Jan 04, 2017, 10:56 AM ISTUpdated : Apr 11, 2018, 12:54 PM IST
ಚೀನಾದ ಹಣದ ಹೊಳೆಗೆ ವಿಶ್ವದ ಘಟಾನುಘಟಿ ಫುಟ್ಬಾಲಿಗರು ಕೊಚ್ಚಿ ಹೋಗಲಿದ್ದಾರಾ?

ಸಾರಾಂಶ

ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್'ನ ಮಾಜಿ ಆಟಗಾರ ಹಾಗೂ ಅರ್ಜೆಂಟೀನಾದ ಕಾರ್ಲೊಸ್ ಟೆವೆಜ್ ಅವರನ್ನ ಶಾಂಘೈ ಶೆನ್'ಹುಆ ಕ್ಲಬ್ ದಾಖಲೆಯ ಮೊತ್ತಕ್ಕೆ ಖರೀದಿಸಿದೆ.

ಬೆಂಗಳೂರು(ಜ. 04): ಒಬ್ಬ ಆಟಗಾರನಿಗೆ ಕ್ಲಬ್'ಗೆ ಆಡಲು 2 ಸಾವಿರ ಕೋಟಿ ರೂಪಾಯಿ ಕೊಡುತ್ತೇನೆ ಎಂದು ಆಫರ್ ಕೊಟ್ಟರೆ ಅದನ್ನು ಸುಲಭವಾಗಿ ತಳ್ಳಿಹಾಕಲು ಸಾಧ್ಯವಾ? ಚೀನಾ ದೇಶ ಇಂಥದ್ದೊಂದು ಹುಚ್ಚಾಟಕ್ಕೆ ಕೈಹಾಕಿದೆ. ಕೆಲ ದಿನಗಳಿಂದ ಇದೇ ಕಾರಣಕ್ಕೆ ಚೀನಾ ದೇಶದ ಹೆಸರು ವಿಶ್ವ ಫುಟ್ಬಾಲ್ ಪ್ರಪಂಚದಲ್ಲಿ ಜನಜನಿತವಾಗಿದೆ. ಫುಟ್ಬಾಲ್'ನಲ್ಲಿ ಜಗತ್ತಿನ ಟಾಪ್-50ರ ಪಟ್ಟಿಗೆ ಇನ್ನೂ ಸೇರದ ಚೀನಾ ದೇಶ ಈಗ ಜಗತ್ತಿನ ಟಾಪ್ ಫುಟ್ಬಾಲ್ ಆಟಗಾರರನ್ನ ತನ್ನತ್ತ ಸೆಳೆಯಲು ಕಸರತ್ತು ನಡೆಸುತ್ತಿದೆ. ಅದರಲ್ಲಿ ತಕ್ಕಮಟ್ಟಿಗೂ ಯಶಸ್ವಿಯಾಗಿದೆ. ಜಗತ್ತಿನ ನಂಬರ್ ಒನ್ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನೇ ಖರೀದಿಸಲು ಪ್ರಯತ್ನಿಸುತ್ತಿರುವ ಚೀನಾ ಈಗಾಗಲೇ ಕೆಲ ಟಾಪ್ ಆಟಗಾರರನ್ನು ಬುಟ್ಟಿಗೆ ಹಾಕಿಕೊಂಡಿದೆ.

ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್'ನ ಮಾಜಿ ಆಟಗಾರ ಹಾಗೂ ಅರ್ಜೆಂಟೀನಾದ ಕಾರ್ಲೊಸ್ ಟೆವೆಜ್ ಅವರನ್ನ ಶಾಂಘೈ ಶೆನ್'ಹುಆ ಕ್ಲಬ್ ದಾಖಲೆಯ ಮೊತ್ತಕ್ಕೆ ಖರೀದಿಸಿದೆ. ಚೀನೀ ಸೂಪರ್ ಲೀಗ್'ನಲ್ಲಿ ಟೆವೆಜ್ ಪ್ರತೀ ವಾರ 51 ಕೋಟಿ ರೂಪಾಯಿ ಗಳಿಸಲಿದ್ದಾರೆ. ಎರಡು ವರ್ಷಗಳ ಕಾಲ ಅವರೊಂದಿಗೆ ಒಪ್ಪಂದವಾಗಿದ್ದು, ಅವರು ಈ ಅವಧಿಯಲ್ಲಿ ಸುಮಾರು 535 ಕೋಟಿ ರೂಪಾಯಿ ಸಂಪಾದನೆ ಮಾಡಲಿದ್ದಾರೆ. ವಿಶ್ವದ ನಂಬರ್ ಒನ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಕೂಡ ಇಷ್ಟು ಸಂಪಾದನೆ ಮಾಡುತ್ತಿಲ್ಲ. ಕಾರ್ಲೊಸ್ ಟೆವೆಜ್ ಈಗ ಜಗತ್ತಿನ ಅತೀ ದುಬಾರಿ ಫುಟ್ಬಾಲ್ ಆಟಗಾರರೆನಿಸಿದ್ದಾರೆ.

ಚಿಲ್ಸೀ ತಂಡದ ಜನಪ್ರಿಯ ಆಟಗಾರ ಆಸ್ಕರ್ ಕೂಡ ಅತೀ ದುಬಾರಿ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಚೀನಾದ ಶಾಂಘೈ ಎಸ್'ಐಪಿಜಿ ಕ್ಲಬ್ ಆಸ್ಕರ್ ಅವರನ್ನು 500 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.

ರಿಯಲ್ ಮ್ಯಾಡ್ರಿಡ್ ಪರ ಆಡುವ ಕ್ರಿಸ್ಟಿಯಾನೋ ರೊನಾಲ್ಡೋ ಅವರು 500ರಿಂದ 520 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಬಾರ್ಸಿಲೋನಾದ ಲಯೋನೆಲ್ ಮೆಸ್ಸಿ ಸುಮಾರು 500 ಕೋಟಿ ರೂ ಸಂಭಾವನೆ ಪಡೆಯುತ್ತಾರೆ.

ರೊನಾಲ್ಡೋಗೆ ಸಾವಿರಾರು ಕೋಟಿ ಸುರಿಯಲು ಚೀನಾ ರೆಡಿ:
ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನ ಕೊಳ್ಳಲು ಚೀನಾದ ಕ್ಲಬ್'ವೊಂದು 2,345 ಕೋಟಿ ರೂಪಾಯಿಗೆ ಬಿಡ್ ಮಾಡಿತ್ತು. ರೊನಾಲ್ಡೋ ಏನಿಲ್ಲಾವೆಂದರೂ ಒಂದು ವಾರಕ್ಕೆ 13 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಆಫರ್ ಇತ್ತು. ರೊನಾಲ್ಡೋ ಅದ್ಯಾಕೋ ತಮ್ಮ ರಿಯಲ್ ಮ್ಯಾಡ್ರಿಡ್ ಕ್ಲಬ್ ಬಿಡಲು ಮನಸ್ಸು ಮಾಡಿಲ್ಲ. ಆದರೆ ಚೀನಾ ಕ್ಲಬ್'ಗಳು ಮಾತ್ರ ತಮ್ಮ ಪ್ರಯತ್ನ ನಿಲ್ಲಿಸಿಲ್ಲ. ರೊನಾಲ್ಡೋ, ಮೆಸ್ಸಿ, ನೆಯ್ಮರ್, ಗರೆತ್ ಬೇಲ್, ಹ್ಯಾರಿ ಕೇನ್ ಮೊದಲಾದ ಘಟಾನುಘಟಿ ಆಟಗಾರರಿಗೆ ಹಣದ ಪ್ರಲೋಭನೆಯೊಡ್ಡಿ ತಮ್ಮ ದೇಶದತ್ತ ಸೆಳೆಯಲು ಪ್ರಯತ್ನಿಸುತ್ತಿವೆ.

ದುಡ್ಡಿದೆ, ದೊಡ್ಡ ಆಟಗಾರರು ಬೇಕು:
ಚೀನಾ ದೇಶ ವಿಶ್ವ ಫುಟ್ಬಾಲ್ ಪಟ್ಟಿಯಲ್ಲಿ 82ನೇ ಸ್ಥಾನದಲ್ಲಿದೆ. ಆದರೆ, ಚೀನಾದ ಕ್ಲಬ್'ಗಳು ಕಳೆದೊಂದು ವರ್ಷದಿಂದ ಸಿಕ್ಕಾಪಟ್ಟೆ ಹಣವನ್ನು ಫುಟ್ಬಾಲ್'ಗೆ ಹೂಡಿಕೆ ಮಾಡುತ್ತಿವೆ. ಚೀನಾವನ್ನು ವಿಶ್ವ ಫುಟ್ಬಾಲ್ ಭೂಪಟದಲ್ಲಿ ಅಗ್ರಗಣ್ಯ ಸ್ಥಾನಕ್ಕೆ ಏರಿಸಲು ಅಲ್ಲಿಯ ಸರಕಾರ ಕೂಡ ಮಹತ್ವಾಕಾಂಕ್ಷೆ ಯೋಜನೆ ಹಾಕಿಕೊಂಡಿದೆ. ಹೀಗಾಗಿ, ಕ್ಲಬ್'ಗಳು ಮನಬಂದಂತೆ ಹಣವನ್ನು ಆಟಗಾರರ ಖರೀದಿಗೆ ಚೆಲ್ಲುತ್ತಿವೆ. ನಿವೃತ್ತಿಯಂಚಿನಲ್ಲಿರುವ ಆಟಗಾರರ ಬದಲು ವೃತ್ತಿಯ ಉಚ್ಚ ಸ್ಥಿತಿಯಲ್ಲಿ ಆಟಗಾರರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಾಗಿ, ರೊನಾಲ್ಡೋ, ಮೆಸ್ಸಿಯಂಥ ಟಾಪ್ ಆಟಗಾರರಿಗೆ ಸಾವಿರಾರು ಕೋಟಿ ಸುರಿಯಲು ಚೀನೀ ಕ್ಲಬ್'ಗಳು ತುದಿಗಾಲಲ್ಲಿ ನಿಂತಿವೆ.

ಭಾರತೀಯರ ಸಂಭಾವನೆ ಎಷ್ಟು?
ಭಾರತದಲ್ಲಿ ಈಗೀಗ ಫುಟ್ಬಾಲ್ ಕಲರವ ಹೆಚ್ಚುತ್ತಿದೆ. ಇಂಡಿಯನ್ ಸೂಪರ್ ಲೀಗ್ ಭಾರತದ ಮಟ್ಟಿಗೆ ಅತ್ಯುನ್ನತ ಫುಟ್ಬಾಲ್ ಆಟದ ಸವಿ ನೀಡುತ್ತಿದೆ. ಕಳೆದ ವರ್ಷದ ಐಎಸ್ಎಲ್ ಬಿಡ್'ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಖರೀದಿಯಾದವರು ಸುನೀಲ್ ಛೇಟ್ರಿ. ಇವರ ವಾರ್ಷಿಕ ಸಂಭಾವನೆ 1.25 ಕೋಟಿ ರೂಪಾಯಿ. ಜಗತ್ತಿನ ಬೇರೆಡೆ ಇರುವ ಸಂಭಾವನೆಗೆ ಹೋಲಿಕೆ ಮಾಡಿದರೆ ಇದು ತೀರಾ ನಗಣ್ಯ. ಆದರೆ, ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಫುಟ್ಬಾಲ್ ಕ್ರೀಡೆ ಉನ್ನತ ಮಟ್ಟಕ್ಕೆ ಬೆಳೆಯುವ ಸೂಚನೆಗಳು ಸಿಕ್ಕಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?