ದೈತ್ಯ ಚೀನಾವನ್ನು ಹೀನಾಯವಾಗಿ ಬಗ್ಗುಬಡಿದ ನೇಪಾಳ

By Web DeskFirst Published Oct 11, 2018, 12:40 PM IST
Highlights

ಚೀನಾ ಪರ ಆರಂಭಿಕ ಬ್ಯಾಟ್ಸ್’ಮನ್ ಎಚ್.ಜೆ ಯಾನ್ 11 ರನ್ ಗಳಿಸಿದ್ದು ಬಿಟ್ಟರೆ, ಮತ್ತೆ ಯಾವ ಬ್ಯಾಟ್ಸ್’ಮನ್ ಕೂಡಾ ಎರಡಂಕಿ ಮೊತ್ತ ಮುಟ್ಟಲು ಸಫಲವಾಗಲಿಲ್ಲ. 

ಕೌಲಲಾಂಪುರ[ಅ.11]: ಜಾಗತಿಕ ಮಟ್ಟದಲ್ಲಿ ಸೂಪರ್ ಪವರ್ ರಾಷ್ಟ್ರವೆನಿಸಿಕೊಂಡಿರುವ ಚೀನಾ ಕ್ರಿಕೆಟ್ ವಿಚಾರದಲ್ಲಿ ಇನ್ನೂ ಅಂಬೆಗಾಲಿಡುತ್ತಿದೆ. ನೆರೆಯ ಚಿಕ್ಕರಾಷ್ಟ್ರವಾದ ನೇಪಾಳದೆದುರು ಹೀನಾಯ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ.

2020ರ ವಿಶ್ವಕಪ್ ಟಿ20 ಟೂರ್ನಿಗೆ ಅರ್ಹತಾ ಸುತ್ತಿನ ಪಂದ್ಯಗಳನ್ನು ಐಸಿಸಿ ಆಯೋಜಿಸಿದ್ದು, ನೇಪಾಳದೆದುರು ಮೊದಲು ಬ್ಯಾಟಿಂಗ್ ಮಾಡಿದ ಚೀನಾ 13 ಓವರ್’ಗಳಲ್ಲಿ ಎರಡರ ಸರಾಸರಿಯಂತೆ 26 ರನ್ ಬಾರಿಸಿದೆ. ಇದಕ್ಕುತ್ತರವಾಗಿ ನೇಪಾಳ ವಿಕೆಟ್ ನಷ್ಟವಿಲ್ಲದೇ ಕೇವಲ 11 ಎಸೆತಗಳಲ್ಲಿ ಗೆಲುವಿನ ನಗೆ ಬೀರಿದೆ.

ಚೀನಾ ಪರ ಆರಂಭಿಕ ಬ್ಯಾಟ್ಸ್’ಮನ್ ಎಚ್.ಜೆ ಯಾನ್ 11 ರನ್ ಗಳಿಸಿದ್ದು ಬಿಟ್ಟರೆ, ಮತ್ತೆ ಯಾವ ಬ್ಯಾಟ್ಸ್’ಮನ್ ಕೂಡಾ ಎರಡಂಕಿ ಮೊತ್ತ ಮುಟ್ಟಲು ಸಫಲವಾಗಲಿಲ್ಲ. 7 ಆಟಗಾರರು ಸೊನ್ನೆ ಸುತ್ತಿದರೆ, ಎಂಟನೇ ಬ್ಯಾಟ್ಸ್’ಮನ್ ಕೂಡಾ ಸೊನ್ನೆ ಸುತ್ತಿ ಅಜೇಯರಾಗುಳಿದರು. ನೇಪಾಳ ಪರ ಯುವ ಆಟಗಾರ ಸಂದೀಪ್ ಲೆಮಿಚ್ಚಾನೆ 4 ಓವರ್’ಗಳಲ್ಲಿ ಒಂದು ಮೇಡನ್ ಸಹಿತ 4 ವಿಕೆಟ್ ಕಬಳಿಸಿದರೆ, ರೆಗ್ಮಿ 5 ರನ್ ನೀಡಿ 3 ಹಾಗೂ ರಾಜ್’ಬನ್ಸಿ 12 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ.

ಇನ್ನು ಸುಲಭ ಗುರಿ ಬೆನ್ನತ್ತಿದ ನೇಪಾಳ ಬಂಡಾರಿ ಅವರ ಸ್ಫೋಟಕ ಬ್ಯಾಟಿಂಗ್[24 ರನ್, 8 ಎಸೆತ, 4 ಬೌಂಡರಿ, 1 ಸಿಕ್ಸರ್], ಆ್ಯರ್ರಿ[4] ನಡಿಸಿ ತಂಡಕ್ಕೆ ಸುಲಭ ಜಯ ತಂದಿತ್ತಿದ್ದಾರೆ.  


 

click me!