2 ದಶಕಗಳ ಬಳಿಕ ಚೆಸ್ ವಿಶ್ವಕಪ್ ಗೆದ್ದ ಭಾರತೀಯ ಎನಿಸಿಕೊಳ್ಳುವ ಕಾತರದಲ್ಲಿರುವ 18ರ ಪ್ರಜ್ಞಾನಂದ, ಮಂಗಳವಾರದ ಮೊದಲ ಸುತ್ತಿನಲ್ಲಿ ಡ್ರಾ ಸಾಧಿಸಿದ್ದರು. ನಾರ್ವೆಯ ಅನುಭವಿ ಹಾಗೂ ಭಾರತದ ಯುವ ಚದುರಂಗ ಚತುರರ ನಡುವೆ ಬುಧವಾರ ನಡೆದ 2ನೇ ಸುತ್ತು ಕೂಡಾ ಡ್ರಾಗೊಂಡಿತು.
ಬಾಕು(ಅಜರ್‌ಬೈಜಾನ್): ಭಾರತದ ಯುವ ಚೆಸ್ ಪಟು ಆರ್.ಪ್ರಜ್ಞಾನಂದ ಹಾಗೂ 5 ಬಾರಿ ವಿಶ್ವ ಚಾಂಪಿಯನ್, ವಿಶ್ವ ನಂ.1 ಮ್ಯಾಗ್ನಸ್ ಕಾಲ್‌ರ್‍ಸನ್ ನಡುವಿನ ಚೆಸ್ ವಿಶ್ವಕಪ್ ಫೈನಲ್‌ನ 2ನೇ ಸುತ್ತಿನ ಹಣಾಹಣಿ ಕೂಡಾ ಡ್ರಾಗೊಂಡಿದೆ. ಹೀಗಾಗಿ ಚೆಸ್ ವಿಶ್ವಕಪ್ ಯಾರ ಮುಡಿಗೇರಲಿದೆ ಎಂದು ಕುತೂಹಲಕ್ಕೆ ಗುರುವಾರ ನಡೆಯಲಿರುವ ಟೈ ಬ್ರೇಕರ್ ಮೂಲಕ ತೆರೆ ಬೀಳಲಿದೆ.
2 ದಶಕಗಳ ಬಳಿಕ ಚೆಸ್ ವಿಶ್ವಕಪ್ ಗೆದ್ದ ಭಾರತೀಯ ಎನಿಸಿಕೊಳ್ಳುವ ಕಾತರದಲ್ಲಿರುವ 18ರ ಪ್ರಜ್ಞಾನಂದ, ಮಂಗಳವಾರದ ಮೊದಲ ಸುತ್ತಿನಲ್ಲಿ ಡ್ರಾ ಸಾಧಿಸಿದ್ದರು. ನಾರ್ವೆಯ ಅನುಭವಿ ಹಾಗೂ ಭಾರತದ ಯುವ ಚದುರಂಗ ಚತುರರ ನಡುವೆ ಬುಧವಾರ ನಡೆದ 2ನೇ ಸುತ್ತು ಕೂಡಾ ಡ್ರಾಗೊಂಡಿತು. ಪ್ರಜ್ಞಾನಂದ ಕಪ್ಪು ಕಾಯಿಗಳೊಂದಿಗೆ ಆಡಿದರು. ಕೇವಲ ಒಂದೂವರೆ ಗಂಟೆ ನಡೆದ ಸುತ್ತಿನಲ್ಲಿ 30 ನಡೆಗಳ ಬಳಿಕ ಉಭಯ ಆಟಗಾರರು ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡರು.
undefined
3 ಬಾರಿ ಟೈ ಬ್ರೇಕರ್ ಗೆದ್ದಿರೋ ಪ್ರಜ್ಞಾನಂದ!
ಪ್ರಜ್ಞಾನಂದ ಈ ಬಾರಿ ಕೂಟದಲ್ಲಿ 3 ಬಾರಿ ಟೈ ಬ್ರೇಕರ್‌ನಲ್ಲಿ ಗೆದ್ದಿದ್ದಾರೆ. ಮೊದಲು ವಿಶ್ವ ನಂ.2 ಹಿಕರು ನಕಮುರಾ ವಿರುದ್ಧ ಟೈ ಬ್ರೇಕರ್ ಗೆದ್ದರೆ, ಕ್ವಾರ್ಟರ್‌ನಲ್ಲಿ ಭಾರತದ ಅರ್ಜುನ್ ಎರಿಗೈಸಿ ವಿರುದ್ಧ ಟೈ ಬ್ರೇಕರ್‌ನ ಸಡನ್ ಡೆತ್‌ನಲ್ಲಿ ಜಯಗಳಿಸಿದರು. ಸೆಮೀಸ್‌ನಲ್ಲಿ ವಿಶ್ವ ನಂ.3 ಫ್ಯಾಬಿಯಾನೋ ವಿರುದ್ಧ ಕೂಡ ಟೈ ಬ್ರೇಕರ್‌ನಲ್ಲೇ ಜಯಿಸಿದ್ದರು.
ವಿಶ್ವ ಅಥ್ಲೆಟಿಕ್ಸ್: ಜೆಸ್ವಿನ್ ಲಾಂಗ್‌ಜಂಪ್ ಫೈನಲ್‌ಗೆ
ಬುಡಾಪೆಸ್ಟ್(ಹಂಗೇರಿ): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಲಾಂಗ್‌ಜಂಪ್‌ನಲ್ಲಿ ಭಾರತದ ಜೆಸ್ವಿನ್ ಆ್ಯಲ್ಡಿರನ್ ಫೈನಲ್ ಪ್ರವೇಶಿಸಿದ್ದು, ಈ ಬಾರಿ ಕೂಟದಲ್ಲಿ ಫೈನಲ್‌ಗೇರಿದ ಮೊದಲ ಭಾರತೀಯ ಎನಿಸಿದ್ದಾರೆ. ಬುಧವಾರ ಜೆಸ್ವಿನ್ ಮೊದಲ ಪ್ರಯತ್ನದಲ್ಲೇ 8 ಮೀ. ದೂರಕ್ಕೆ ಜಿಗಿದು, 12ನೇ ಸ್ಥಾನಿಯಾಗಿ ಫೈನಲ್‌ಗೇರಿದರು. ಇದೇ ವೇಳೆ ಕೂಟದಲ್ಲಿ ಪದಕ ಭರವಸೆ ಮೂಡಿಸಿದ್ದ ಮುರಳಿ ಶ್ರೀಶಂಕರ್ ಫೈನಲ್‌ಗೇರಲು ವಿಫಲರಾದರು. ಅವರು 7.44 ಮೀ. ದೂರಕ್ಕೆ ಜಿಗಿದು ಒಟ್ಟಾರೆ 22ನೇ ಸ್ಥಾನಿಯಾದರು. ಇನ್ನು, ಮಹಿಳೆಯರ ಜಾವೆಲಿನ್ ಎಸೆತದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅನ್ನು ರಾಣಿ ಕೂಡಾ ಫೈನಲ್‌ಗೇರಲಿಲ್ಲ. ಅವರು 57.05 ಮೀ. ದೂರದ ಎಸೆತ ದಾಖಲಿಸಿ 19ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 12 ಮಂದಿ ಫೈನಲ್‌ಗೇರಿದರು.
Chess World Cup: ಫೈನಲ್ ಮೊದಲ ಸುತ್ತಿನಲ್ಲಿ ಡ್ರಾ ಸಾಧಿಸಿದ ಪ್ರಜ್ಞಾನಂದ..!
ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದ ಅಮನ್‌ಪ್ರೀತ್ ಸಿಂಗ್
ಬಾಕು(ಅಜರ್‌ಬೈಜಾನ್): ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ 5ನೇ ಚಿನ್ನದ ಪದಕ ಒಲಿದಿದೆ. ಬುಧವಾರ ಪುರುಷರ 25 ಮೀ. ಪಿಸ್ತೂಲ… ಸ್ಪರ್ಧೆಯ ಫೈನಲ್‌ನಲ್ಲಿ ಅಮನ್‌ಪ್ರೀತ್ ಸಿಂಗ್ ಬಂಗಾರಕ್ಕೆ ಮುತ್ತಿಟ್ಟರು. ಇದು ಈವರೆಗಿನ ವಿಶ್ವ ಕೂಟದಲ್ಲೇ ಈ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನ. ಕಳೆದ ವರ್ಷ ವಿಜಯ್‌ವೀರ್ ಸಿಧು ಕಂಚು ಗೆದ್ದಿದ್ದರು. ಇನ್ನು ಮಹಿಳೆಯರ 25 ಮೀ. ಪಿಸ್ತೂಲ್ ತಂಡ ವಿಭಾಗದಲ್ಲಿ ಭಾರತಕ್ಕೆ ಕಂಚು ದೊರೆಯಿತು. ಸದ್ಯ ಭಾರತ ಕೂಟದಲ್ಲಿ 5 ಚಿನ್ನ, 4 ಕಂಚಿನೊಂದಿಗೆ 9 ಪದಕ ಜಯಿಸಿ 2ನೇ ಸ್ಥಾನದಲ್ಲಿದೆ.
ಆಟಗಾರ್ತಿಗೆ ಚುಂಬಿಸಿದ ಸ್ಪೇನ್ ಫುಟ್ಬಾಲ್ ಅಧ್ಯಕ್ಷ..! ವಿಡಿಯೋ ವೈರಲ್
ಫಿಬಾ ಕೇಂದ್ರ ಮಂಡಳಿಗೆ ಗೋವಿಂದರಾಜು ಸದಸ್ಯ
ಬೆಂಗಳೂರು: ಫಿಬಾ ಏಷ್ಯಾ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಅವರು ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಶನ್(ಫಿಬಾ) ಕೇಂದ್ರೀಯ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಹುದ್ದೆಗೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಬುಧವಾರ ಫಿಬಾ ನೂತನ ಪದಾಧಿಕಾರಿಗಳ ಜೊತೆ ಸಭೆಯಲ್ಲಿ ಪಾಲ್ಗೊಂಡರು. ಗೋವಿಂದರಾಜು ಅವರ ಕಾರಾರಯವಧಿ 2027ರ ವರೆಗೂ ಇರಲಿದೆ.