
ಮಾಂಟ್ರೆಲ್(ಆ.11): ಫ್ರೆಂಚ್ ಓಪನ್ ಚಾಂಪಿಯನ್ ಸ್ಪೇನ್'ನ ಸ್ಟಾರ್ ಟೆನಿಸಿಗ ರಾಫೆಲ್ ನಡಾಲ್, ಎಟಿಪಿ ಮಾಂಟ್ರೆಲ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ರ್ಕ್ವಾಟರ್'ಫೈನಲ್‌ನಲ್ಲಿ ಕೆನಡಾದ 18 ವರ್ಷದ ಯುವ ಆಟಗಾರನೆದುರು ಸೋಲುಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಗುರುವಾರ ತಡರಾತ್ರಿ ನಡೆದ ಸಿಂಗಲ್ಸ್'ನ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ನಡಾಲ್ 6-3, 4-6, 6-7(4-7) ಸೆಟ್'ಗಳಿಂದ ಕೆನಡಾದ ಡೆನ್ನಿಸ್ ಶಾಪೊವಾಲ್ವೊ ಎದುರು ಪರಾಭವ ಹೊಂದಿದರು. ಈ ಮೂಲಕ ಶಾಪೊವಾಲ್ವೊ ಕ್ವಾರ್ಟರ್'ಫೈನಲ್ ಹಂತಕ್ಕೆ ಲಗ್ಗೆ ಇಟ್ಟರು.
ಪಂದ್ಯದ ಮೊದಲ ಸೆಟ್'ನಲ್ಲಿ ಸುಲಭ ಗೆಲುವು ಪಡೆದ ನಡಾಲ್'ಗೆ ಇನ್ನುಳಿದ ಎರಡೂ ಸೆಟ್'ಗಳಲ್ಲಿ ಎದುರಾಳಿ ಆಟಗಾರ ತಿರುಗೇಟು ನೀಡುವಲ್ಲಿ ಸಫಲರಾದರು. 3ನೇ ಸೆಟ್'ನಲ್ಲಿ ಟೈ ಬ್ರೇಕರ್ ಅವಕಾಶದಿಂದ ಕೆನಡಾದ ಆಟಗಾರ ಅಂಕ ಹೆಚ್ಚಿಸಿಕೊಂಡು ಪಂದ್ಯ ಜಯಿಸಿದರು. ಈ ಮೂಲಕ ಎಟಿಪಿ ಮಾಂಟ್ರೆಲ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್'ಫೈನಲ್ ಪ್ರವೇಶಿಸಿದ ಅತಿ ಕಿರಿಯ ಆಟಗಾರ ಎನ್ನುವ ಖ್ಯಾತಿಗೂ ಕೆನಡಾದ ಆಟಗಾರ ಪಾತ್ರರಾದರು.
'ನಾನು ಜೀವನದಲ್ಲಿ ಒಮ್ಮೆಯಾದರು ನಡಾಲ್, ಫೆಡರರ್, ಮರ್ರೆಯವರಂತಹ ದಿಗ್ಗಜರೊಂದಿಗೆ ಆಡಬೇಕೆಂದು ಕನಸು ಕಾಣುತ್ತಿದ್ದೆ. ಇಂದು ಆ ಕನಸು ನನಸಾಗಿದೆ' ಎಂದು ಗೆಲುವಿನ ಬಳಿಕ ಶಾಪೊವಾಲ್ವೊ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.