2030ರ ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯದಿಂದ ಕೆನಡಾ ಹಿಂದಕ್ಕೆ..!

By Kannadaprabha News  |  First Published Aug 5, 2023, 11:31 AM IST

ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಶನ್‌ಗೆ ಶಾಕ್ ನೀಡಿದ ಕೆನಡಾ
2030ರ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದ ಆತಿಥ್ಯ ಪಡೆದುಕೊಂಡಿದ್ದ ಕೆನಡಾದ ಆಲ್ಬರ್ಟಾ ಪ್ರಾಂತ್ಯ
ಕೆನಡಾ ಈ ಹಿಂದೆ 1930, 1954, 1978 ಹಾಗೂ 1994ರ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಿತ್ತು


ಲಂಡನ್‌(ಆ.05): 2030ರ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದ ಆತಿಥ್ಯದಿಂದ ಕೆನಡಾದ ಆಲ್ಬರ್ಟಾ ಪ್ರಾಂತ್ಯ ಹಿಂದೆ ಸರಿದಿದೆ. 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಆತಿಥ್ಯದಿಂದ ಆಸ್ಟ್ರೇಲಿಯಾ ಹಿಂದೆ ಸರಿದ ಕೆಲವೇ ವಾರಗಳಲ್ಲಿ ಮತ್ತೊಂದು ರಾಷ್ಟ್ರ, ಆತಿಥ್ಯವನ್ನು ನಿರಾಕರಿಸಿರುವುದು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಶನ್‌(ಸಿಜಿಎಫ್‌)ಗೆ ಆಘಾತ ಮೂಡಿಸಿದೆ. 

ಕ್ರೀಡಾಕೂಟವನ್ನು ಆಯೋಜಿಸಲು ಸುಮಾರು 2.01 ಬಿಲಿಯನ್‌ ಅಮೆರಿಕನ್‌ ಡಾಲರ್(ಅಂದಾಜು 16000 ಕೋಟಿ ರುಪಾಯಿ) ಬೇಕಾಗಬಹುದು ಎಂದು ಅಂದಾಜಿಸಿರುವ ಆಲ್ಬಾರ್ಟ ಪ್ರಾಂತ್ಯ , ಈ ಪ್ರಮಾಣದಲ್ಲಿ ತನ್ನ ತೆರಿಗೆದಾರರ ಹಣವನ್ನು ಬಳಕೆ ಮಾಡಲು ತಾನು ಸಿದ್ದವಿಲ್ಲ ಎಂದಿದೆ. ಜೊತೆಗೆ ಆರ್ಥಿಕ ಸಂಕಷ್ಟದಿಂದ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಕ್ರೀಡಾಕೂಟದ ಆಯೋಜನೆಯಿಂದ ಹಿಂದೆ ಸರಿದಿದ್ದು ತಮ್ಮ ನಿರ್ಧಾರದ ಮೇಲೆ ಪರಿಣಾಮ ಬೀರಿದೆ ಎಂದು ಆಲ್ಬರ್ಟಾದ ಕ್ರೀಡಾ ಹಾಗೂ ಪ್ರವಾಸೋದ್ಯಮ ಸಚಿವ ಜೋಸೆಫ್‌ ಶೋ ಹೇಳಿದ್ದಾರೆ. ಕೆನಡಾ ಈ ಹಿಂದೆ 1930, 1954, 1978 ಹಾಗೂ 1994ರ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಿತ್ತು.

Latest Videos

undefined

ಆಸ್ಟ್ರೇಲಿಯನ್ ಓಪನ್‌: ಪ್ರಣಯ್, ಪ್ರಿಯಾನ್ಶು ಸೆಮೀಸ್‌ಗೆ ಲಗ್ಗೆ..!

ಸಿಡ್ನಿ: ಭಾರತದ ತಾರಾ ಶಟ್ಲರ್ ಎಚ್‌ ಎಸ್ ಪ್ರಣಯ್ ಹಾಗೂ ಯುವ ಶಟ್ಲರ್ ಪ್ರಿಯಾನ್ಶು ರಾಜಾವತ್, ಆಸ್ಟ್ರೇಲಿಯನ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಪ್ರಶಸ್ತಿ ಸುತ್ತಿಗೇರಲು ಶನಿವಾರ ಇವರಿಬ್ಬರು ಮುಖಾಮುಖಿಯಾಗಲಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.9 ಪ್ರಣಯ್, ವಿಶ್ವ ನಂ.2 ಹಾಗೂ ಒಲಿಂಪಿಕ್ಸ್‌ ಪದಕ ವಿಜೇತ ಇಂಡೋನೇಷ್ಯಾದ ಆಂಟೋನಿ ಜಿಂಟಿಂಗ್ ವಿರುದ್ದ 16-21, 21-17, 21-14 ಗೇಮ್‌ಗಳಲ್ಲಿ ಜಯಿಸಿದರು. ಈ ರೋಚಕ ಹಣಾಹಣಿಯು 73 ನಿಮಿಷಗಳ ಕಾಲ ನಡೆಯಿತು. ಇನ್ನು 21ರ ಪ್ರಿಯಾನ್ಶು, ಭಾರತದವರೇ ಆದ ಕಿದಂಬಿ ಶ್ರೀಕಾಂತ್‌ರನ್ನು 21-13, 21-8 ಗೇಮ್‌ಗಳಲ್ಲಿ ಬಗ್ಗುಬಡಿದು, ಚೊಚ್ಚಲ ಬಾರಿಗೆ ಸೂಪರ್‌ 500 ಹಂತದ ಟೂರ್ನಿಯು ಸೆಮೀಸ್‌ಗೇರಿದರು.

ವಿಶ್ವಕಪ್‌ಗೆ ಕ್ಷಣಗಣನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ ಸ್ಟಾರ್ ಕ್ರಿಕೆಟಿಗ..!

ಇದೇ ವೇಳೆ ವರ್ಷದ ಮೊದಲ ಪ್ರಶಸ್ತಿ ಗೆಲ್ಲುವ ಪಿ ವಿ ಸಿಂಧು ಕನಸು ಭಗ್ನಗೊಂಡಿತು. 39 ನಿಮಿಷಗಳಲ್ಲಿ ಮುಕ್ತಾಯಗೊಂಡ ಮಹಿಳಾ ಸಿಂಗಲ್ಸ್‌ ಅಂತಿಮ 8ರ ಸುತ್ತಿನಲ್ಲಿ ಅಮೆರಿಕದ ಬೀವೆನ್‌ ಝಾಂಗ್ ವಿರುದ್ದ 12-21, 17-21ರಲ್ಲಿ ಪರಾಭವಗೊಂಡರು.

ವಿಶ್ವ ಆರ್ಚರಿ: ಭಾರತಕ್ಕೆ ಐತಿಹಾಸಿಕ ಚಿನ್ನ..!

ಬರ್ಲಿನ್‌: ಜ್ಯೋತಿ ಸುರೇಶಖಾ, ಅದಿತಿ ಸ್ವಾಮಿ ಹಾಗೂ ಪರ್ನೀತ್ ಕೌರ್ ಅವರಗಳನ್ನೊಳಗೊಂಡ ಭಾರತ ತಂಡ, ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನ ಮಹಿಳೆಯರ ಕಾಂಪೌಂಡ್‌ ವಿಭಾಗದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದೆ.

ಅಯ್ಯೋ ವಿಧಿಯೇ..! ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 15 ವರ್ಷದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು..!

ಶುಕ್ರವಾರ ನಡೆದ ಫೈನಲ್‌ನಲ್ಲಿ ಭಾರತ ತಂಡ ಮೆಕ್ಸಿಕೋ ವಿರುದ್ದ 235-229 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಸೆಮಿಫೈನಲ್‌ನಲ್ಲಿ ಕೊಲಂಬಿಯಾ ವಿರುದ್ದ 220-226ರಲ್ಲಿ ಜಯಿಸಿತ್ತು. ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಭಾರತ ಈ ಮೊದಲು 9 ಬೆಳ್ಳಿ , 2 ಕಂಚಿನ ಪದಕಗಳನ್ನು ಗೆದ್ದಿತ್ತು.

ಡಬ್ಲ್ಯುಎಫ್‌ಐ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮಹಿಳಾ ಅಥ್ಲೀಟ್‌

ನವದೆಹಲಿ: ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಕ್ಷಿ ನುಡಿದಿದ್ದ, 2010ರ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ಕುಸ್ತಿಪಟು ಅನಿತಾ ಆ.12ರಂದು ನಡೆಯಲಿರುವ ಭಾರತೀಯ ಕುಸ್ತಿ ಫೆಡರೇಶನ್‌ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಅವರು ಚುನಾವಣಾ ಕಣದಲ್ಲಿರುವ ಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಒಟ್ಟು 4 ಮಂದಿ ಸ್ಪರ್ಧಿಸಲಿದ್ದು, ಈ ಪೈಕಿ ಜೈ ಪ್ರಕಾಶ್‌ ಹಾಗೂ ಸಂಜಯ್‌ ಸಿಂಗ್‌ ಬ್ರಿಜ್‌ರ ಆಪ್ತರು. ಉಳಿದಂತೆ ದುಶ್ಯಂತ್‌ ಶರ್ಮಾ ಕೂಡಾ ಸ್ಪರ್ಧಿಸುತ್ತಿದ್ದಾರೆ. ಒಟ್ಟಾರೆ 15 ಸ್ಥಾನಗಳಿಗೆ 32 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

click me!