ವಿಶ್ವಚಾಂಪಿಯನ್’ಶಿಪ್: ಸೈನಾ ಹೋರಾಟ ಅಂತ್ಯ

By Web Desk  |  First Published Aug 3, 2018, 6:14 PM IST

ಸೈನಾ ನೆಹ್ವಾಲ್ ಎದುರು ಮೊದಲ ಗೇಮ್’ನ್ನು ಅನಾಯಾಸವಾಗಿ ಗೆದ್ದುಕೊಂಡ ಮರಿನ್, ಎರಡನೇ ಸೆಟ್’ನಲ್ಲೂ ಅದೇ ಪ್ರದರ್ಶನವನ್ನು ಮುಂದುವರೆಸಿದರು. ಬಲಿಷ್ಠ ಸ್ಮಾಶ್ ಹಾಗೂ ಆಕರ್ಷಕ ಡ್ರಾಪ್’ಗಳ ಮೂಲಕ ಸೈನಾರನ್ನು ತಬ್ಬಿಬ್ಬುಗೊಳಿಸುವಲ್ಲಿ ಕರೋಲಿನ ಯಶಸ್ವಿಯಾದರು.  

ನಾನ್ಜಿಂಗ್(ಆ.03]: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್ ಹೋರಾಟ ಅಂತ್ಯವಾಗಿದೆ. ಸ್ಪೇನ್’ನ ಕರೋಲಿನಾ ಮರಿನ್ ಎದುರು ನೇರ ಗೇಮ್ಸ್’ಗಳಲ್ಲಿ ಮುಗ್ಗರಿಸುವ ಮೂಲಕ ಸೈನಾ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಸತತ 8ನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದ ಸೈನಾ, ರಿಯೋ ಚಿನ್ನದ ಪದಕ ವಿಜೇತೆ ಎದುರು 21-06, 21-11 ನೇರ ಗೇಮ್ಸ್’ಗಳಲ್ಲಿ ಸೋತು ನಿರಾಸೆ ಅನುಭವಿಸಿದರು. ಕೇವಲ 31 ನಿಮಿಷ ನಡೆದ ಹೋರಾಟದಲ್ಲಿ ಸೈನಾ ಒಲಿಂಪಿಕ್ಸ್ ಚಾಂಪಿಯನ್’ಗೆ ತಕ್ಕ ಪ್ರತಿರೋಧ ಒಡ್ಡಲು ವಿಫಲರಾದರು. 

Tap to resize

Latest Videos

click me!