ಹಾರ್ದಿಕ್ ಪಾಂಡ್ಯ ಜೊತೆ ಸಂಬಂಧ; ಮೌನ ಮುರಿದ ಉರ್ವಶಿ ರೌಟೆಲಾ!

By Web Desk  |  First Published Jul 29, 2019, 6:09 PM IST

2018ರಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ಉರ್ವಶಿ ರೌಟೆಲಾ ಡೇಟಿಂಗ್ ಕುರಿತು ಸುದ್ದಿ ಹರಡಿತ್ತು. ಒಂದು ವರ್ಷಗಳ ಬಳಿಕ ಉರ್ವಶಿ ರೌಟೆಲಾ ಇದೀಗ ಮೌನ ಮುರಿದಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಬಂಧದ  ಕುರಿತು ಉರ್ವಶಿ ಮಾತನಾಡಿದ್ದಾರೆ. 


ಮುಂಬೈ(ಜು.29): ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೆಸರು ಹಲವು ಬಾಲಿವುಡ್ ಬೆಡಗಿಯರು, ಮಾಡೆಲ್ ಜೊತೆ ಥಳುಕು ಹಾಕಿದೆ.  ಇದರಲ್ಲಿ ಹೆಚ್ಚು ಸದ್ದು ಮಾಡಿದ ಹೆಸರು, ಬಾಲಿವುಡ್ ನಟಿ ಉರ್ವಶಿ ರೌಟೆಲಾ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಹಾಗೂ ಉರ್ವಶಿ ರೌಟೆಲಾ ನಡುವಿನ ಗುಪ್ ಚುಪ್ ಸಂಬಂಧ ಸುದ್ದಿಯಾಗಿದೆ. ಆದರೆ ಈ ಕುರಿತು ಪಾಂಡ್ಯ ಅಥವಾ ಉರ್ವಶಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಉರ್ವಶಿ ರೌಟೆಲಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಾಗೆ ಕೈ ಕೊಟ್ಟ ಚೆಲುವೆ, ಎಲ್ಲಾ ಮಾಯವೋ!

Tap to resize

Latest Videos

undefined

ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ಸಂಬಂದ, ಡೇಟಿಂಗ್ ಎಂದು ಹಲವು ಊಹಾಪೋಹಗಳು ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಿದೆ. ಯುಟ್ಯೂಟ್ ಚಾನೆಲ್‌ಗಳಲ್ಲಿ ವಿಡೀಯೋ ವೈರಲ್ ಆಗುತ್ತಿದೆ. ಮಾನ್ಯ ಮಾಧ್ಯಮಗಳೇ ಈ ರೀತಿ ಸುಳ್ಳು ಸುದ್ದಿ ಹರಡಬೇಡಿ.  ನನಗೂ ಹಾಗೂ ನನ್ನ ಕುಟುಂಬಕ್ಕೆ ಇದರಿಂದ ನೋವಾಗುತ್ತಿದೆ ಎಂದು  ಉರ್ವಶಿ ರೌಟೆಲಾ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಶರ್ಟ್ ಬೆಲೆಗೆ ಬೆಂಗ್ಳೂರಲ್ಲಿ ಸಿಗುತ್ತೆ 1BHK ಬಾಡಿಗೆ ಮನೆ

2018ರಲ್ಲಿ ಮೊದಲ ಬಾರಿಗೆ ಉರ್ವಶಿ ರೌಟೆಲಾ ಹೆಸರು ಹಾರ್ದಿಕ್ ಪಾಂಡ್ಯ ಜೊತೆ ಥಳುಕು ಹಾಕಿಕೊಂಡಿತ್ತು. ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಸ್ಟಾರ್ ಸೆಲೆಬ್ರೆಟಿಗಳ ಪೋಸ್ಟ್ ಹಾಗೂ ಕಮೆಂಟ್‌ಗಳನ್ನೇ ಆಧಾರವಾಗಿಟ್ಟುಕೊಂಡು ಈ ರೀತಿ ಸುದ್ದಿ ಹರಡಲಾಗಿತ್ತು. ಇದೀಗ ಸ್ವತಃ ಉರ್ವಶಿ ಎಲ್ಲಾ ಊಹಾಪೋಹಳಿಗೆ ತೆರೆ ಎಳೆದಿದ್ದಾರೆ.
 

click me!