ವಿರಾಟ್ ಕೊಹ್ಲಿ'ಯನ್ನು ಕೋತಿ ಎಂದ ಬಾಲಿವುಡ್ ನಟ

Published : May 09, 2017, 03:11 AM ISTUpdated : Apr 11, 2018, 12:45 PM IST
ವಿರಾಟ್ ಕೊಹ್ಲಿ'ಯನ್ನು ಕೋತಿ ಎಂದ ಬಾಲಿವುಡ್ ನಟ

ಸಾರಾಂಶ

ಬೆಂಗಳೂರಿನಲ್ಲಿ  ಮೇ 7ರಂದು ಕೆಕೆಆರ್ ಹಾಗೂ ಆರ್'ಸಿ'ಬಿ ಪಂದ್ಯ ನಡೆದು ಆ ಪಂದ್ಯದಲ್ಲಿ ಬೆಂಗಳೂರು ಕೋಲ್ಕತ್ತಾ ವಿರುದ್ಧ ಸೋಲು ಅನುಭವಿಸಿತ್ತು.

ಮುಂಬೈ(ಮೇ.09): ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳುವವರಿಗೇನು ಕಡಿಮೆಯೇನಿಲ್ಲ. ಆದರೆ ಬಾಲಿವುಡ್ ನಟನೊಬ್ಬ ಕೊಹ್ಲಿಯನ್ನು  ಕೋತಿಯಂದು ಜರಿದಿದ್ದಾನೆ.

ಆ ನಟ ಮತ್ತಿನ್ಯಾರು ಅಲ್ಲ ಇತ್ತೀಚಿನ ದಿನಗಳಿಂದ ಸಿನಿಮಾ ನಟರನ್ನು ಅಣಕಿಸಿ ವಿವಾದಕ್ಕೀಡಾಗಿರುವ ಕಮಲ್ ಆರ್ ಖಾನ್. ಈತ  ಅಂತಹ ಅದ್ಭುತ ನಟನೇನಲ್ಲ. ಒಂದೆರಡು ಚಿತ್ರಗಳಲ್ಲಿ ನಟಿಸಿ, ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದಾನೆ. ಬೆಂಗಳೂರಿನಲ್ಲಿ  ಮೇ 7ರಂದು ಕೆಕೆಆರ್ ಹಾಗೂ ಆರ್'ಸಿ'ಬಿ ಪಂದ್ಯ ನಡೆದು ಆ ಪಂದ್ಯದಲ್ಲಿ ಬೆಂಗಳೂರು ಕೋಲ್ಕತ್ತಾ ವಿರುದ್ಧ ಸೋಲು ಅನುಭವಿಸಿತ್ತು.

ಪಂದ್ಯ ನಡೆಯುವ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದ ಕಮಲ್ ಆರ್ ಖಾನ್ ಟ್ವೀಟ್ ಮಾಡಿದ್ದ ನಟ, ಕೊಹ್ಲಿ ಮನವಿ ಮಾಡಿದ ತಕ್ಷಣ ಬ್ಯಾಟ್ಸ್'ಮೆನ್ ಔಟ್ ಎಂದು ತೀರ್ಪು ನೀಡಬೇಕು ಇಲ್ಲದಿದ್ದರೆ ಮೈದಾನದಲ್ಲಿ ಕೋತಿಯಂತೆ ನೆಗೆದಾಡುತ್ತಾನೆ. ಈ ಟ್ವೀಟ್'ಗೆ ಕಾರಣವಾಗಿದ್ದು ಅಂಪೈರ್ ಯೂಸುಫ್ ಪಠಾಣ್ ಆಟವಾಡುತ್ತಿದ್ದಾಗ ಬೌಲರ್ ಔಟ್ ಎಂದು ಮನವಿ ಮಾಡಿದ್ದರು. ಆಗ ಔಟ್ ನೀಡಿರಲಿಲ್ಲ. ಇದನ್ನು ಟ್ವೀಟ್ ಮಾಡುವಾಗ ಬಳಸಿಕೊಂಡಿದ್ದ ಆ ನಟ.ಅದಲ್ಲದೆ ಧೋನಿಯನ್ನು ಕೂಡ ಶೋಮ್ಯಾನ್ ಎಂಬಂತೆ ಬಣ್ಣಿಸಿದ್ದಾನೆ. ಧೋನಿ ಕಳಪೆ ಆಟವಾಡಿ ನಂತರ ಶೂ ಮ್ಯಾನ್ ರೀತಿ ವರ್ತಿಸುತ್ತಾರೆ ಎಂದು ಸಹ ಟ್ವೀಟ್ ಮಾಡಿದ್ದ.  

ಮಲಯಾಳಿ ಸೂಪರ್ ಸ್ಟಾರ್'ಗಳಾದ ಮೋಹನ್ ಲಾಲ್ ಹಾಗೂ ಮಮ್ಮುಟ್ಟಿಯವರನ್ನು ಕೂಡ ಅಣಕಿಸಿ ಅಭಿಮಾನಿಗಳಿಂದ ಟೀಕೆಗೊಳಗಾಗಿದ್ದ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ಯಾಮರೋನ್ ಗ್ರೀನ್ ಬಳಿಕ ಮತ್ತೋರ್ವ ಕಾಸ್ಟ್ಲಿ ಆಟಗಾರನನ್ನು ಖರೀದಿಸಿದ ಕೋಲ್ಕತಾ! ಕೆಕೆಆರ್ ಈಗ ಮತ್ತಷ್ಟು ಬಲಿಷ್ಠ
ಗ್ರೀನ್‌ನಿಂದ ಮೊರಿಸ್‌ವರೆಗೆ, ಐಪಿಎಲ್‌ ಮಿನಿ ಹರಾಜಿನ ಅತ್ಯಂತ ದುಬಾರಿ ಪ್ಲೇಯರ್ಸ್‌!