
ಮೆಲ್ಬೋರ್ನ್(ಮಾ.07): ಕ್ರಿಕೆಟ್ ಆಟಗಾರರ ಬ್ಯಾಟ್ ಗಾತ್ರ ಕಡಿಮೆ ಮಾಡುವ ಮತ್ತು ಮೈದಾನದಲ್ಲಿ ಆಟಗಾರರ ವರ್ತನೆಗೆ ಕಡಿವಾಣ ಹಾಕುವ ನೂತನ ಕಟ್ಟುನಿಟ್ಟಿನ ನಿಯಮಗಳು ಮುಂದಿನ ಅಕ್ಟೋಬರ್‌ನಿಂದ ಜಾರಿಯಾಗಲಿದೆ ಎಂದು ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ತಂಡದ ಮುಖ್ಯಸ್ಥ ಜಾನ್ ಸ್ಟೀಫನ್ಸನ್ ಹೇಳಿದ್ದಾರೆ.
ಪಂದ್ಯದ ವೇಳೆ ಆಟಗಾರರು ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನ ತೋರಿದರೆ ಕ್ರಿಕೆಟಿಗರನ್ನು ಪಂದ್ಯದಿಂದಲೇ ಹೊರಹಾಕುವ ನೂತನ ಕಾನೂನು ಶೀಘ್ರದಲ್ಲಿ ಬರಲಿದೆ.
ಹಾಗೆ 2000ದಲ್ಲಿ ಕ್ರೀಡಾ ನಿಯಮದ ಪ್ರಕಾರ ಬ್ಯಾಟ್'ನ ಗಾತ್ರವನ್ನು ಕಡಿಮೆಗೊಳಿಸಲಾಗಿತ್ತು. ಇದೀಗ ಮತ್ತೆ ಬ್ಯಾಟ್'ನ ಗಾತ್ರವನ್ನು ಕಡಿಮೆ ಮಾಡುವ ನಿಯಮ ಕೂಡ ಚಾಲ್ತಿಗೆ ಬರಲಿದೆ ಎಂದು ಸ್ಟೀಫನ್ಸನ್ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ಎದುರಾಳಿ ತಂಡದ ಬ್ಯಾಟ್ಸ್'ಮನ್ ಅವಾಚ್ಯ ಮಾತುಗಳಿಂದ ನಿಂದಿಸಿದರೆ, ಉದ್ದೇಶಪೂರ್ವಕವಾಗಿ ದೇಹದ ಮೇಲೆ ಬಾಲನ್ನು ಎಸೆದರೆ ಬ್ಯಾಟಿಂಗ್ ಮಾಡುವ ತಂಡಕ್ಕೆ ತಕ್ಷಣ 5 ರನ್ ನೀಡುವ ನಿಯಮವೂ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.