ಬೆಂಗ​ಳೂ​ರಿ​ನಿಂದ BFC ಎತ್ತಂಗ​ಡಿ?

Published : Sep 19, 2019, 05:36 PM ISTUpdated : Sep 19, 2019, 05:39 PM IST
ಬೆಂಗ​ಳೂ​ರಿ​ನಿಂದ BFC ಎತ್ತಂಗ​ಡಿ?

ಸಾರಾಂಶ

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಫುಟ್ಬಾಲ್ ತಂಡ ಪುಣೆಯ ಬಾಲೆ​ವಾಡಿ ಕ್ರೀಡಾಂಗಣವನ್ನು ತನ್ನ ತವರು ಕ್ರೀಡಾಂಗಣವಾಗಿ ಸ್ವೀಕ​ರಿ​ಸುತ್ತಿ​ರು​ವು​ದಾಗಿ ಘೋಷಿ​ಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗ​ಳೂರು[ಸೆ.19]: ಮುಂಬ​ರುವ ಋುತು​ವಿಗೆ ಬೆಂಗ​ಳೂರು ಫುಟ್ಬಾಲ್‌ ಕ್ಲಬ್‌ (ಬಿ​ಎಫ್‌ಸಿ) ಪುಣೆಯ ಬಾಲೆ​ವಾಡಿ ಕ್ರೀಡಾಂಗಣವನ್ನು ತನ್ನ ತವರು ಕ್ರೀಡಾಂಗಣವಾಗಿ ಸ್ವೀಕ​ರಿ​ಸುತ್ತಿ​ರು​ವು​ದಾಗಿ ಘೋಷಿ​ಸಿದೆ. ಕಳೆದ 5-6 ವರ್ಷಗಳಿಂದ ತನ್ನ ಭದ್ರ​ಕೋಟೆ ಎನಿ​ಸಿದ್ದ ಇಲ್ಲಿನ ಕಂಠೀ​ರವ ಕ್ರೀಡಾಂಗಣದಲ್ಲಿ ಮುಂದು​ವ​ರಿ​ಯಲು ಅನು​ಮತಿ ಸಿಗದ ಕಾರಣ ಬಿಎಫ್‌ಸಿ ಈ ನಿರ್ಧಾ​ರಕ್ಕೆ ಬಂದಿದೆ. 

ತಂಡ ಅಖಿಲ ಭಾರ​ತ ಫುಟ್ಬಾಲ್‌ ಫೆಡ​ರೇ​ಷನ್‌ (ಎ​ಐ​ಎಫ್‌ಎಫ್‌) ಕ್ಲಬ್‌ ಪರ​ವಾ​ನಗಿ ಮಾನ​ದಂಡಗಳನ್ನು ಅನು​ಸ​ರಿ​ಸ​ಬೇ​ಕಿದೆ. ಅಕ್ಟೋ​ಬರ್‌ 20ರಿಂದ ಇಂಡಿ​ಯನ್‌ ಸೂಪರ್‌ ಲೀಗ್‌ (ಐ​ಎಸ್‌ಎಲ್‌) ಆರಂಭ​ಗೊ​ಳ್ಳ​ಲಿದ್ದು, ತಂಡ ತನ್ನ ತವ​ರಿನ ಪಂದ್ಯ​ಗ​ಳನ್ನು ಪುಣೆಯಲ್ಲಿ ಆಡುವ ಸಾಧ್ಯತೆ ದಟ್ಟ​ವಾ​ಗಿದೆ.

ಕಂಠೀರವದಲ್ಲಿ ಫುಟ್ಬಾಲ್‌ ವಿರೋಧಿಸಿ ಪ್ರತಿಭಟನೆ

ಬೆಂಗ​ಳೂರು ಎಫ್‌ಸಿ ತಂಡ ಎಎಫ್‌ಸಿ ಕಪ್‌ನಲ್ಲೂ ಪಾಲ್ಗೊ​ಳ್ಳುವ ಕಾರಣ, ಸೆಪ್ಟೆಂಬ​ರ್‌ 15ರೊಳಗೆ ತನ್ನ ತವರು ಪಂದ್ಯ​ಗ​ಳನ್ನು ಯಾವ ಕ್ರೀಡಾಂಗಣದಲ್ಲಿ ಆಡ​ಲಿದೆ ಎನ್ನು​ವು​ದನ್ನು ನೋಂದಣಿ ಮಾಡ​ಬೇಕಿತ್ತು. ಪುಣೆಯ ಬಾಲೆ​ವಾಡಿ ಕ್ರೀಡಾಂಗಣ ಹಾಗೂ ಅಹ​ಮ​ದಾ​ಬಾದ್‌ನ ಟ್ರ್ಯಾನ್ಸ್‌ ಸ್ಟೇಡಿಯಾ ಅರೇನಾ ಮಾತ್ರ ಲಭ್ಯ​ವಿದ್ದ ಕಾರಣ, ಎಎಫ್‌ಸಿ ಮಾನ​ದಂಡದಂತೆ ಪುಣೆಯನ್ನು ಆಯ್ಕೆ ಮಾಡಿ​ಕೊಂಡಿದೆ.

ಬಿಎಫ್‌ಸಿ ತಂಡದ ಮಾಲಿ​ಕರು, ಕಂಠೀ​ರವ ಕ್ರೀಡಾಂಗಣ ಪಡೆಯಲು ಪ್ರಯತ್ನ ಮುಂದು​ವ​ರಿ​ಸು​ವು​ದಾಗಿ ಸ್ಪಷ್ಟ​ಪ​ಡಿ​ಸಿ​ದ್ದಾರೆ. ಎಎಫ್‌ಸಿ ಪಂದ್ಯ​ಗ​ಳಿಗೆ ಆತಿಥ್ಯ ವಹಿ​ಸುವ ಸ್ಥಳಗಳನ್ನು ಬದ​ಲಿ​ಸಲು ಜನ​ವರಿ ವರೆಗೂ ಅವ​ಕಾಶವಿದೆ. ಬಿಎಫ್‌ಸಿ ತಂಡ ಬೆಂಗ​ಳೂರಿನಿಂದ ಹೊರ ಹೋಗು​ತ್ತಿ​ರುವುದಕ್ಕೆ ಸಾಮಾ​ಜಿಕ ತಾಣ​ಗ​ಳಲ್ಲಿ ಅಭಿ​ಮಾ​ನಿ​ಗಳು ನಿರಾಸೆ ವ್ಯಕ್ತ​ಪ​ಡಿ​ಸಿ​ದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ಗೆ ಗ್ರೀನ್‌ ಸಿಗ್ನಲ್‌?

ಅಥ್ಲೆ​ಟಿಕ್ಸ್‌ ಸಂಸ್ಥೆಗೆ ಯಶ​ಸ್ಸು!: ಬಿಎಫ್‌ಸಿ ತಂಡ ಬೆಂಗ​ಳೂ​ರಿ​ನಿಂದ ಹೊರ​ಹೋ​ಗಲು ನಿರ್ಧ​ರಿ​ಸಿ​ರು​ವುದು, ಕರ್ನಾ​ಟಕ ರಾಜ್ಯ ಅಥ್ಲೆ​ಟಿಕ್ಸ್‌ (ಕೆ​ಎಎ) ಸಂಸ್ಥೆಯ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾ​ಗಿ​ದೆ. ಕಂಠೀ​ರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ಸೇರಿ​ದಂತೆ ಇತರ ಚಟು​ವ​ಟಿಕೆಗಳಿಗೆ ಅವ​ಕಾಶ ನೀಡ​ಬಾ​ರದು ಎಂದು ಕೆಎಎ ಇತ್ತೀ​ಚೆಗೆ ಪ್ರತಿ​ಭ​ಟನೆ ಸಹ ನಡೆ​ಸಿತ್ತು. ಕಳೆದ ವರ್ಷ ಈ ಪ್ರಕ​ರಣ ಹೈಕೋರ್ಟ್‌ ಮೆಟ್ಟಿಲ್ಲೇ​ರಿತ್ತು. ಕಂಠೀ​ರವದಲ್ಲಿ ಫುಟ್ಬಾಲ್‌ ನಡೆ​ಸಿದರೆ ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆಯಾಗ​ಲಿದೆ ಎಂದು ಹೋರಾಟ ನಡೆ​ಸಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cricket: 30 ಎಸೆತಗಳ ಆಟವೂ ಅಂತರರಾಷ್ಟ್ರೀಯ ಪಂದ್ಯವಾ? ಭಾರತ-ಜಪಾನ್ ಕದನದ ಹಿನ್ನೆಲೆಯಲ್ಲಿ ಐಸಿಸಿ ರೂಲ್ಸ್‌ ಬಿಚ್ಚಿಟ್ಟ ಸತ್ಯ!
India vs Japan T20: ಕೊನೆ ಓವರ್‌ವರೆಗೂ ವಿಶ್ವ ಚಾಂಪಿಯನ್ನರನ್ನು ನಡುಗಿಸಿದ ಜಪಾನ್: 2 ರನ್‌ಗಳಿಂದ ಭಾರತಕ್ಕೆ ರೋಚಕ ಜಯ