ಕ್ರಿಸ್ ಗೇಲ್ ಸವಾಲಿಗೆ ಸಿದ್ದವೆಂದ ಸನ್ನಿ ಲಿಯೋನ್

By Suvarna Web Desk  |  First Published Jul 19, 2017, 11:50 PM IST

. ಸಾಕಷ್ಟುಮಂದಿಗೇಲ್ಸವಾಲನ್ನುಸ್ವೀಕರಿಸಿದ್ದರು. ಇದೀಗಅಖಾಡಕ್ಕೆಸ್ವತಃಸನ್ನಿಯೇಇಳಿದಿದ್ದು, ‘ಗೇಲ್ನಿಮ್ಮಸವಾಲನ್ನುನಾನುಸ್ವೀಕರಿಸುತ್ತೇನೆ. ಆದರೆ, ನಿಮಗಿಂತಮೊದಲೇನಾನುಹಾಡಿಗೆನೃತ್ಯಮಾಡಿದ್ದೇನೆಎಂಬುದುತಿಳಿದಿರಲಿ


ಮುಂಬೈ(ಜು.19): ವೆಸ್ಟ್‌ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಟ್ವಿಟರ್‌ನಲ್ಲಿ ಎಸೆದಿದ್ದ ಸವಾಲನ್ನು ನಟಿ ಸನ್ನಿ ಲಿಯೋನ್ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಸನ್ನಿ ಅಭಿನಯದ ‘ರಯೀಸ್’ ಚಿತ್ರದ ‘ಲೈಲಾ’ ಹಾಡಿಗೆ ಹೆಜ್ಜೆ ಹಾಕಿದ್ದ ಗೇಲ್, ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದೇ ವೇಳೆ ಗೇಲ್, ಈ ಹಾಡಿಗೆ ನನಗಿಂತ ಚೆನ್ನಾಗಿ ನೃತ್ಯ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದರೆ 5 ಸಾವಿರ ಅಮೆರಿಕನ್ ಡಾಲರ್ ನೀಡುವುದಾಗಿ ಸವಾಲು ಹಾಕಿದ್ದರು.

ಸಾಕಷ್ಟು ಮಂದಿ ಗೇಲ್ ಸವಾಲನ್ನು ಸ್ವೀಕರಿಸಿದ್ದರು. ಇದೀಗ ಅಖಾಡಕ್ಕೆ ಸ್ವತಃ ಸನ್ನಿಯೇ ಇಳಿದಿದ್ದು, ‘ಗೇಲ್ ನಿಮ್ಮ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಆದರೆ, ನಿಮಗಿಂತ ಮೊದಲೇ ನಾನು ಆ ಹಾಡಿಗೆ ನೃತ್ಯ ಮಾಡಿದ್ದೇನೆ ಎಂಬುದು ತಿಳಿದಿರಲಿ’ ಎನ್ನುವ ಮೂಲಕ ಗೇಲ್‌ರ ಕಾಲೆಳದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೇಲ್, ‘ಹಾ... ನಿಮ್ಮ ನೃತ್ಯವನ್ನು ನೋಡಿದ್ದೇನೆ ಸುಂದರವಾಗಿ ಹೆಜ್ಜೆ ಹಾಕಿದ್ದೀರಿ’ ಎಂದು ಟ್ವೀಟ್ ಮಾಡಿದ್ದಾರೆ.

Tap to resize

Latest Videos

click me!