
ರಷ್ಯಾ(ಜೂ.23): ಫಿಫಾ ವಿಶ್ವಕಪ್ ಟೂರ್ನಿಯ ಬೆಲ್ಜಿಯಂ ಹಾಗೂ ತುನಿಷಿಯಾ ನಡುವಿನ ಪಂದ್ಯ ಅಭಿಮಾನಿಗಳಿಗೆ ಗೋಲಿನ ರಸದೌತಣ ನೀಡಿತು. ರೋಚಕ ಹೋರಾಟದಲ್ಲಿ ಬೆಲ್ಜಿಯಂ 5 ಗೋಲು ಸಿಡಿಸಿದರೆ, ತುನಿಷಿಯಾ 2 ಗೋಲು ಬಾರಿಸಿತು. ಹೀಗಾಗಿ ಅಭಿಮಾನಿಗಳು 7 ಗೋಲುಗಳ ಸವಿಯುಂಡರು.
5-2 ಅಂತರದ ಭರ್ಜರಿ ಗೆಲುವಿನೊಂದಿಗೆ ಬೆಲ್ಜಿಯಂ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಪಂದ್ಯ ಆರಂಭಗೊಂಡ 6ನೇ ನಿಮಿಷದಲ್ಲೇ ಬೆಲ್ಜಿಯಂ ಪೆನಾಲ್ಟಿ ಅವಕಾಶವನ್ನ ಸದುಪಯೋಗ ಪಡಿಸಿಕೊಂಡಿತು. ಈಡನ್ ಹಜಾರ್ಡ್ ಸಿಡಿಸಿದ ಪೆನಾಲ್ಟಿ ಗೋಲಿನಿಂದ ಬೆಲ್ಜಿಯಂ 1-0 ಮುನ್ನಡೆ ಸಾಧಿಸಿತು.
16ನೇ ನಿಮಿಷದಲ್ಲಿ ರೋಮೇಲು ಲುಕಾಲು ಸಿಡಿಸಿ ಗೋಲಿನಿಂದ ಬೆಲ್ಜಿಯಂ 2-0 ಮುನ್ನಡೆ ಸಾಧಿಸಿತು. ಅಷ್ಟರಲ್ಲಿ ತುನಿಷಿಯಾ ಕೂಡ ಎಚ್ಚೆತ್ತುಕೊಂಡಿತು. 18ನೇ ನಿಮಿಷದಲ್ಲಿ ಮೊದಲ ಗೋಲು ಸಿಡಿಸೋ ಮೂಲಕ ಹಿನ್ನಡೆ ಅಂತರವನ್ನ ಕಡಿಮೆಗೊಳಿಸಿತು. ಮೊದಲಾರ್ಧದ ಅಂತಿಮ ಕ್ಷಣದಲ್ಲಿ ರೋಮೇಲು ಲುಕಾಲು ಮತ್ತೊಂದು ಗೋಲು ಸಿಡಿಸಿದರು. ಈ ಮೂಲಕ ಫಸ್ಟ್ ಹಾಫ್ ಮುಕ್ತಾಯದ ವೇಳೆ ಬೆಲ್ಜಿಯಂ 3-1 ಮುನ್ನಡೆ ಕಾಯ್ದುಕೊಂಡಿತು.
ದ್ವಿತಿಯಾರ್ಧದಲ್ಲಿ ಬೆಲ್ಜಿಯಂ ಅಬ್ಬರ ಮತ್ತಷ್ಟು ಹೆಚ್ಚಾಯಿತು. ಈಡನ್ ಹಜಾರ್ಡ್ 51 ನೇ ನಿಮಿಷದಲ್ಲಿನ ಗೋಲು ಬೆಲ್ಜಿಯಂ ಗೋಲಿನ ಅಂತರವನ್ನ 4-1ಕ್ಕೇರಿಸಿತು. 90ನೇ ನಿಮಿಷದಲ್ಲಿ ಬೆಲ್ಜಿಯಂನ ಮಿಕಿ ಬಟ್ಶುವಾಯಿ ಗೋಲು ಬಾರಿಸಿದರು. 1-5 ಹಿನ್ನಡೆಯಲ್ಲಿದ್ದ ತುನಿಷಿಯಾ 90+3ನೇ ನಿಮಿಷದಲ್ಲಿ ವಹ್ಬಿ ಖರ್ಜಿ ಗೋಲಿನಿಂದ ಸೋಲಿನ ಅಂತರವನ್ನ 2-5ಕ್ಕೆ ಇಳಿಸಿತು.
ತುನಿಷಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಬೆಲ್ಜಿಯಂ ಮೈದಾನದಲ್ಲೇ ಸಂಭ್ರಮಾಚರಣೆ ಆರಂಭಿಸಿತು. ಇತ್ತ ಅಭಿಮಾನಿಗಳು ಬರೋಬ್ಬರಿ 7 ಗೋಲಿನ ಅಮಲಿನಲ್ಲಿ ತೇಲಾಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.