ಕಳೆದ 5 ವರ್ಷಗಳಿಂದ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಸಂಜಯ್ ಬಾಂಗರ್‌ಗೆ ಇತ್ತೀಚೆಗಷ್ಟೇ ತಂಡದಿಂದ ಗೇಟ್‌ಪಾಸ್ ನೀಡಲಾಗಿತ್ತು. ಇದೇ ಮೊದಲ ಬಾರಿಗೆ ಬಾಂಗರ್ ತುಟಿಬಿಚ್ಚಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಸೆ.12]: ಕಳೆದ 5 ವರ್ಷಗಳ ಕಾಲ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಾಂಗರ್, ವಿಶ್ವಕಪ್ ನಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯಕ್ಕೆ ಬಲಿ ಪಶುವಾಗಿದ್ದರು. ಇತ್ತೀಚೆಗಷ್ಟೇ ಬಾಂಗರ್ ಅವರನ್ನು ಬಿಸಿಸಿಐ ಕೋಚ್ ಹುದ್ದೆಯಿಂದ ಕೈ ಬಿಟ್ಟಿತ್ತು.
ಕೈತಪ್ಪಿದ ಕೋಚ್ ಹುದ್ದೆ: ಆಯ್ಕೆಗಾರನ ಜತೆ ಬಾಂಗರ್ ಜಗಳ!
undefined
ಇದೀಗ ಮೊದಲ ಬಾರಿಗೆ ಮೌನ ಮುರಿದಿರುವ ಬಾಂಗರ್, ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. 2014ರಿಂದ ಸತತ 3 ವರ್ಷಗಳ ಕಾಲ ಭಾರತ ತಂಡವನ್ನು ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಹಾಗೆ ಮಾಡಿದ್ದೆನು. ಆದರೂ ನನ್ನನ್ನು ಕೋಚ್ ಸ್ಥಾನದಿಂದ ತೆಗೆದುಹಾಕಿದ್ದು ಬೇಸರ ತಂದಿದೆ ಎಂದು ಬಾಂಗರ್ ಹೇಳಿದ್ದಾರೆ.
ಗೇಲ್ ಶತಕ ನೀರಲ್ಲಿ ಹೋಮ, ಪಂದ್ಯದಲ್ಲಿ ದಾಖಲಾಯ್ತು ಬರೋಬ್ಬರಿ 37 ಸಿಕ್ಸರ್..!
ವಿಶ್ವಕಪ್‌ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಅಲ್ಲದೇ ಭಾರತಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ನೀಡದೆ ಇರುವುದು ಬಾಂಗರ್, ಕೈ ಬಿಡಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.