ಡೋಪಿಂಗ್:  ಟೀಮ್ ಇಂಡಿಯಾದ ಆಟಗಾರನಿಗೆ 8 ತಿಂಗಳು ಗೇಟ್‌ಪಾಸ್

By Web Desk  |  First Published Jul 30, 2019, 11:33 PM IST

ಮಹಿಳೆಯರ ಬಗ್ಗೆ ಕಮೆಂಟ್ ಮಾಡಿ ಕ್ರಿಕೆಟಿಗರಾದ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಶಿಕ್ಷೆಗೆ ಗುರಿಯಾಗಿದ್ದರು. ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ  ಉದಯೋನ್ಮೂಖ ಆಟಗಾರ ಫೃಥ್ವಿ ಶಾ ಬಿಸಿಸಿಐನಿಂದ ನಿಷೇಧಕ್ಕೆ ಒಳಗಾಗಿದ್ದಾರೆ.


ನವದೆಹಲಿ[ಜು. 30]  ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಪ್ರತಿಭಾವಂತ ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರನ್ನು ಎಲ್ಲಾ ಮಾದರಿಯ  ಕ್ರಿಕೆಟ್ ನಿಂದ ಎಂಟು ತಿಂಗಳ ಕಾಲ ಬಿಸಿಸಿಐ ಬ್ಯಾನ್ ಮಾಡಿದೆ.

19 ವರ್ಷದ ಪೃಥ್ವಿ ಶಾ ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದರು.ಐಪಿಎಲ್ ನಲ್ಲಿ ಡೆಲ್ಲಿ ತಂಡದ ಪರವಾಗಿ ಆಡುತ್ತಿದ್ದರು.  ಸೈಯದ್ ಮುಸ್ತಾಕ್ ಆಲಿ ಟಿ-20 ಟೂರ್ನಮೆಂಟ್ ವೇಳೆಯಲ್ಲಿ  ಡೋಪ್ ಪರೀಕ್ಷೆ ನಡೆಸಲಾಗಿತ್ತು.

Latest Videos

undefined

BCCIಗೆ ಬೆದರಿದ ICC; ಜಿಂಬಾಬ್ವೆ ಮೇಲಿನ ನಿಷೇಧ ವಾಪಾಸ್!

ಪೃಥ್ವಿ ಶಾ ಜೊತೆಗೆ ವಿದರ್ಭದ ಅಕ್ಷಯ್ ದುಲ್ಲಾರ್ ವಾರ್ ಹಾಗೂ ರಾಜಸ್ತಾನದ ದಿವ್ಯ ಗಜರಾಜ್ ಅವರು ಕೂಡಾ ಡೋಪ್  ಪರೀಕ್ಷೆಯಲ್ಲಿ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ. ಮುಂಬೈ ಕ್ರಿಕೆಟ್ ಅಸೊಸಿಯೇಷನ್ ಆಟಗಾರ ಪೃಥ್ವಿ ಶಾ ಅವರನ್ನು ಅಮಾನತು ಮಾಡಿದೆ.

ಮಾರ್ಚ್ 16 ರಿಂದ ನವೆಂಬರ್ 15 ರವರೆಗೂ ಅನ್ವಯವಾಗುವಂತೆ ಪೃಥ್ವಿ ಶಾ ಅವರನ್ನು ಎಂಟು ತಿಂಗಳ ಕಾಲ ಅಮಾನತು ಮಾಡಲಾಗಿದ್ದು, ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಶಾ ಅಲಭ್ಯರಾಗಿದ್ದಾರೆ.
 

click me!