RTI ವ್ಯಾಪ್ತಿಗೆ BCCI..?

By Suvarna Web DeskFirst Published Jan 11, 2018, 1:04 PM IST
Highlights

ಈ ಹಿಂದೆ ಬಿಸಿಸಿಐ ಆಡಳಿತಾತ್ಮಕ ಸುಧಾರಣೆಗೆ ಸಂಬಂಧಿಸಿದ ಆರ್.ಎಂ ಲೋಧಾ ಸಮಿತಿ ಹಾಗೂ ಐಪಿಎಲ್ ಸ್ಫಾಟ್-ಫಿಕ್ಸಿಂಗ್ ಕುರಿತು ತನಿಖೆ ಮಾಡಿದ ನ್ಯಾಯಮೂರ್ತಿ ಮುಕುಲ್ ಮುದ್ಗುಲ್ ಸಮಿತಿ ಕೂಡಾ ಬಿಸಿಸಿಐಯನ್ನು ಆರ್'ಟಿಐ ವ್ಯಾಪ್ತಿಗೆ ತರಬೇಕೆಂದು ಶಿಫಾರಸು ಮಾಡಿತ್ತು.

ನವದೆಹಲಿ(ಜ.11): ಬಿಸಿಸಿಐ ಅನ್ನು ಮಾಹಿತಿ ಹಕ್ಕು ಕಾಯ್ದೆ (ಆರ್'ಟಿಐ) ಅಡಿಯಲ್ಲಿ ತರಬೇಕು ಎಂದು ಕೇಂದ್ರ ಕಾನೂನು ಆಯೋಗ ಶಿಫರಾಸು ಮಾಡುವ ಸಾಧ್ಯತೆಯಿದೆ. ಕ್ರೀಡೆಗೆ ಸಂಬಂಧ ಪಟ್ಟ ಎಲ್ಲ ಮಾಹಿತಿಗಳು ಸಾರ್ವಜನಿಕರಿಗೂ ಲಭ್ಯವಾಗಬೇಕೆಂಬ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ.

ಬಿಸಿಸಿಐ ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಅನುದಾನವನ್ನು ಪಡೆಯುತ್ತಿದೆ. ಇದರಲ್ಲಿ ತೆರಿಗೆ ವಿನಾಯಿತಿ ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ನಿವೇಶನವನ್ನು ಪಡೆಯುತ್ತಿದೆ. 2007ರಿಂದ ಈಚೆಗೆ ಬಿಸಿಸಿಐ ತೆರಿಗೆ ಪಾವತಿಸಿಲ್ಲ. ಕಳೆದ 10 ವರ್ಷಗಳಲ್ಲಿ ಬಿಸಿಸಿಐ 2,100 ಕೋಟಿ ತೆರಿಗೆ ವಿನಾಯಿತಿ ಪಡೆದಿದೆ. ಹೀಗಾಗಿ ಕಾನೂನು ಆಯೋಗ ಬಿಸಿಸಿಐನ್ನು ಆರ್'ಟಿಐನಲ್ಲಿ ಸೇರಿಸುವ ಬಗ್ಗೆ ಚಿಂತನೆ ನಡೆಸಿದೆ.

click me!