ಐಸಿಸಿ ಹಣಕಾಸು ಸಮಿತಿಗೆ ಠಾಕೂರ್

By Web DeskFirst Published Oct 15, 2016, 2:09 PM IST
Highlights

ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಹಣಕಾಸು ಹಾಗೂ ವಾಣಿಜ್ಯ ವ್ಯವಹಾರಗಳ ಸಮಿತಿಗೆ ಸೇರ್ಪಡೆಗೊಳಿಸಲು ನಿರ್ಧರಿಸಿದೆ.

ನವದೆಹಲಿ(ಅ.15): ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಹಣಕಾಸು ಹಾಗೂ ವಾಣಿಜ್ಯ ವ್ಯವಹಾರಗಳ ಸಮಿತಿಗೆ ಸೇರ್ಪಡೆಗೊಳಿಸಲು ನಿರ್ಧರಿಸಿದೆ.

ಇಂದು ಕೇಪ್‌ಟೌನ್‌ನಲ್ಲಿ ನಡೆದ ಸಭೆಯಲ್ಲಿ ಐಸಿಸಿ ಈ ಬಗ್ಗೆ ತೀರ್ಮಾನ ಕೈಗೊಂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಮುಖ ನಿರ್ಣಯಗಳಲ್ಲದೆ, ಆದಾಯಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಕೈಗೊಳ್ಳುವುದರಲ್ಲಿ ಈ ಸಮಿತಿ ಮಹತ್ವದ ಪಾತ್ರವಹಿಸಲಿದೆ. ಇಂತಹ ಪ್ರಭಾವಿ ಸಮಿತಿಗೆ ಅನುರಾಗ್ ಅವರನ್ನು ಸೇರಿಸಲಾಗಿದೆ.

Latest Videos

ಐಸಿಸಿಯ ಹಣಕಾಸು ಸಮಿತಿಯ ಸಭೆಗೆ ತನ್ನನ್ನು ಆಹ್ವಾನಿಸದೆ ಕಡೆಗಣಿಸಲಾಗಿದೆ ಎಂದು ಈ ಮೊದಲು ಭಾರತ ಕ್ರಿಕೆಟ್ ಮಂಡಳಿ ದೂರಿತ್ತು.

click me!