ಟೀಂ ಇಂಡಿಯಾ ನೂತನ ಕೋಚ್ ಆಯ್ಕೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಹಲವು ದಿಗ್ಗಜರು ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೋಚ್ ರವಿ ಶಾಸ್ತ್ರಿ ಬದಲಾವಣೆಗೆ ಬಿಸಿಸಿಐ ಹಿಂದೇಟು ಹಾಕಿದೆ. ಹೀಗಾಗಿ ಅರ್ಜಿ ಆಹ್ವಾನಿಸಿದ ಕಾರಣವೇನು? ಇಲ್ಲಿದೆ ವಿವರ.
ಮುಂಬೈ(ಜು.26): ಟೀಂ ಇಂಡಿಯಾ ಸದ್ಯ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿದೆ. ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವದಿಯನ್ನು ವಿಂಡೀಸ್ ಪ್ರವಾಸಕ್ಕೆ ವಿಸ್ತರಿಸಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಬಿಸಿಸಿಐ ಅರ್ಜಿ ಕೂಡ ಆಹ್ವಾನಿಸಿದೆ. ಆದರೆ ಕೋಚ್ ಆಗಿ ಶಾಸ್ತ್ರಿಯನ್ನೇ ಮುಂದುವರಿಸುವ ಆಲೋಚನೆಯಲ್ಲಿರುವ ಬಿಸಿಸಿಐ, ಅರ್ಜಿ ಆಹ್ವಾನಿಸಿ ನಾಟಕವಾಡಿತಾ ಅನ್ನೋ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ರೇಸಲ್ಲಿ ಜಾಂಟಿ ರೋಡ್ಸ್
ಕೋಚ್ ಸ್ಥಾನದಲ್ಲಿ ರವಿ ಶಾಸ್ತ್ರಿಯನ್ನು ಮುಂದುವರಿಸಲು ಬಿಸಿಸಿಐ ಒಲವು ತೋರಿದೆ. ಇತ್ತ ನಾಯಕ ವಿರಾಟ್ ಕೊಹ್ಲಿ ಕೂಡ ಶಾಸ್ತ್ರಿ ಪರ ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮುಂದಿನ ಕೋಚ್ ಆಗಿ ರವಿ ಶಾಸ್ತ್ರಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಹೀಗಿರುವಾಗಿ ಬಿಸಿಸಿಐ ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿರುವುದು ಯಾಕೆ ಅನ್ನೋ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ: ಯಾರಾಗ್ತಾರೆ ಟೀಂ ಇಂಡಿಯಾ ಮುಂದಿನ ಕೋಚ್..?
ಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಜೊತೆ ಉತ್ತಮ ಹೊಂದಾಣಿಕೆ ಇದೆ. ಶಾಸ್ತ್ರಿ ಅವದಿಯಲ್ಲಿ ಟೀಂ ಇಂಡಿಯಾ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ಆದರೆ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಶಾಸ್ತ್ರಿ ಬದಲಾಯಿಸಿದರೆ ತಂಡಕ್ಕೆ ನಷ್ಟ ಅನ್ನೋ ಅಭಿಪ್ರಾಯ ಬಿಸಿಸಿಐನಲ್ಲಿದೆ. ಹೀಗಾಗಿ ಬಿಸಿಸಿಐ ನಡೆ ಗೊಂದಲ ಮೂಡಿಸಿದೆ.