
ನವದೆಹಲಿ(ಮಾ.16): ಪತ್ನಿಯಿಂದಲೇ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ತನಿಖೆ ಆರಂಭಿಸಿರುವುದಾಗಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ನೀರಜ್ ಕುಮಾರ್ ತಿಳಿಸಿದ್ದಾರೆ.
‘ಬಿಸಿಸಿಐನ ತನಿಖೆ ಸಹಕರಿಸುವುದಾಗಿ ಶಮಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಂತೆ ತಾವು ಯಾವುದೇ ಹಣವನ್ನು ಸ್ವೀಕರಿಸಿಲ್ಲ ಎಂದು ಶಮಿ ಹೇಳಿಕೆ ನೀಡಿದ್ದಾರೆ’ ಎಂದು ನೀರಜ್ ಹೇಳಿದ್ದಾರೆ. ‘ವರದಿ ಸಲ್ಲಿಸಲು 1 ವಾರ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಸಿಒಎಗೆ ವರದಿ ಸಲ್ಲಿಸುವುದಾಗಿ’ ಹೇಳಿದ್ದಾರೆ.
ಫಿಕ್ಸಿಂಗ್ ಸಂಬಂಧ ಶಮಿ ಪತ್ನಿ ಹಸೀನ್ ಜಹಾನ್ ಬಿಡುಗಡೆಗೊಳಿಸಿದ್ದ ದೂರವಾಣಿ ಸಂಭಾಷಣೆಯನ್ನು ಆಲಿಸಿದ ಬಳಿಕ ಸಿಒಎ ಮುಖ್ಯಸ್ಥ ವಿನೋದ್ ರಾಯ್ ತನಿಖೆಗೆ ಆದೇಶಿಸಿದ್ದರು. ಒಂದು ವಾರದೊಳಗೆ ವರದಿ ನೀಡುವಂತೆ ನೀರಜ್'ಗೆ ಪತ್ರ ಬರೆದಿರುವ ರಾಯ್, ಎಲ್ಲೂ ‘ಮ್ಯಾಚ್ ಫಿಕ್ಸಿಂಗ್’ ಎನ್ನುವ ಪದ ಬಳಸಿಲ್ಲ. ಆದರೆ, ದೂರವಾಣಿ ಸಂಭಾಷಣೆ ವೇಳೆ ಕೇಳಿಬರುವ ಮೊಹಮದ್ ಭಾಯ್ ಹಾಗೂ ಅಲಿಶ್ಬಾ ಎನ್ನುವವರು ಯಾರು? ಅವರಿಂದ ಮೊಹಮದ್ ಶಮಿ ಹಣ ಪಡೆದಿದ್ದಾರಾ?, ಒಂದೊಮ್ಮೆ ಹಣ ಪಡೆದಿದ್ದರೆ ಅದರ ಉದ್ದೇಶವೇನು? ಎಂಬುದನ್ನು ತನಿಖೆ ಮಾಡುವಂತೆ ಸೂಚಿಸಿದ್ದರು.
ಇದೇ ವೇಳೆ ಶಮಿ ವಿರುದ್ಧದ ದೂರಿನ ಪ್ರತಿಯನ್ನು ಹಸೀನ್ ಜಹಾನ್ ಸಿಒಎಗೆ ಸಲ್ಲಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.