ಐಪಿಎಲ್ ಪಂದ್ಯದ ಸಮಯ ಬಹಿರಂಗ ಪಡಿಸಿದ ಬಿಸಿಸಿಐ!

By Web Desk  |  First Published Mar 7, 2019, 8:10 PM IST

ಐಪಿಎಲ್ ಟೂರ್ನಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಪಂದ್ಯದ ಸಮಯವನ್ನೂ ಬಿಡುಗಡೆ ಮಾಡಿದೆ. ಸಂಪೂರ್ಣ ಟೂರ್ನಿಯ ಪಂದ್ಯಗಳು ನಡೆಯುವ ಸಮಯ ಪಟ್ಟಿಯನ್ನು ಬಿಸಿಸಿ ಬಹಿರಂಗ ಪಡಿಸಿದೆ.
 


ಮುಂಬೈ(ಮಾ.07): ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ.  ಲೋಕಸಭಾ ಚುನಾವಣೆಯಿಂದಾಗಿ ಈ ಬಾರಿ ಸಂಪೂರ್ಣ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಿಲ್ಲ. ಆರಂಭಿಕ 2 ವಾರಗಳ ವೇಳಾಪಟ್ಟಿ ಬಿಡುಗಡೆ ಮಾಡಿದ್ದ ಬಿಸಿಸಿಐ, ಇದೀಗ ಪಂದ್ಯಗ ಸಮಯ ಬಹಿರಂಗ ಪಡಿಸಿದೆ.

ಇದನ್ನೂ ಓದಿ: ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

Tap to resize

Latest Videos

ಮಾರ್ಚ್ 23 ರಿಂದ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಆರಂಭಿಕ 19 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ ಸಂಪೂರ್ಣ ಟೂರ್ನಿಯಲ್ಲಿನ ಪಂದ್ಯದ ಸಮಯ ಬಹಿರಂಗ ಪಡಿಸಿದೆ.  ಸಂಜೆ 4 ಗಂಟೆಗೆ ಹಾಗೂ ರಾತ್ರಿ 8 ಗಂಟೆ ಐಪಿಎಲ್ ಪಂದ್ಯಗಳು ಆರಂಭವಾಗಲಿದೆ ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ: IPL 2019: ಆರ್‌ಸಿಬಿ ತಂಡದಲ್ಲಿರುವ ಹಿರಿಯ ಹಾಗೂ ಕಿರಿಯ ಕ್ರಿಕೆಟಿಗ!

ಮಾರ್ಚ್ 23 ರಿಂದ ಎಪ್ರಿಲ್ 5ರ ವರೆಗಿನ ವೇಳಾಪಟ್ಟಿಯನ್ನ ಬಿಸಿಸಿಐ ಅನೌನ್ಸ್ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೋರಾಟ ನಡೆಸಲಿದೆ. ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಣದಲ್ಲಿ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. ತವರಿನ RCB ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡಸಲಿದೆ. ಆರಂಭಿಕ ವೇಳಾಪಟ್ಟಿಯ ಅಂತಿಮ ಪಂದ್ಯ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ. ಎಪ್ರಿಲ್ 5 ರಂದು RCB ತಂಡ ಕೋಲ್ಕತ್ತಾ ನೈಟ್ ರೈಡಸ್ಸ್ ವಿರುದ್ದ ಹೋರಾಟ ನಡೆಸಲಿದೆ.

click me!