ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

By Web Desk  |  First Published Feb 19, 2019, 3:38 PM IST

12ನೇ ಆವೃತ್ತಿ ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡಿದೆ. ಆದರೆ ಲೋಕಸಭಾ ಚುನಾವಣೆ ದಿನಾಂಕ ಇನ್ನೂ ಪ್ರಕಟಗೊಳ್ಳದ ಕಾರಣ ಬಿಸಿಸಿಐ ಆರಂಭಿಕ  2 ವಾರಗಳ ವೇಳಾಪಟ್ಟಿಯನ್ನ ಪ್ರಕಟಿಸಿದೆ. 17 ಪಂದ್ಯಗಳ ಈ ವೇಳಾಪಟ್ಟಿಯಲ್ಲಿ ಉದ್ಘಾಟನೆ ಪಂದ್ಯ ಆಡೋ ತಂಡ ಯಾವುದು? ಇಲ್ಲಿದೆ ಪಂದ್ಯಗಳ ವಿವರ.


ಮುಂಬೈ(ಫೆ.19): ಲೋಕಸಭಾ ಚುನಾವಣೆಯಿಂದಾಗಿ 12ನೇ ಆವೃತ್ತಿ ಐಪಿಎಲ್ ವೇಳಾಪಟ್ಟಿ ಪ್ರಕಟಿಸಲು ಮೀನಾಮೇಷ ಎಣಿಸುತ್ತಿದ್ದ ಬಿಸಿಸಿಐ ಕೊನೆಗೂ ವೇಳಾಪಟ್ಟಿ ಪ್ರಕಟಿಸಿದೆ. ಆದರೆ ಆರಂಭಿಕ 2 ವಾರಗಳ ವೇಳಾಪಟ್ಟಿಯನ್ನ ಮಾತ್ರ ಪ್ರಕಟಿಸಿದ್ದು, ಉಳಿದ ಪಂದ್ಯಗಳ ವೇಳಾಪಟ್ಟಿಯನ್ನ ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ಬಳಿಕ ಬಿಸಿಸಿಐ ಪ್ರಕಟಿಸಲಿದೆ.

ಇದನ್ನೂ ಓದಿ: ಐಪಿಎಲ್ 2019: ವಿರಾಟ್ ಕೊಹ್ಲಿ ಪುಡಿ ಮಾಡಲಿದ್ದಾರೆ 3 ದಾಖಲೆ!

Tap to resize

Latest Videos

undefined

ಮಾರ್ಚ್ 23 ರಿಂದ 2019ರ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಸದ್ಯ ಆರಂಭಿಕ 19 ಪಂದ್ಯಗಳ ಐಪಿಎಲ್ ಪಂದ್ಯದಳ ವೇಳಾಪಟ್ಟಿ ಪ್ರಕಟಗೊಂಡಿದೆ. ಎಪ್ರಿಲ್ 5ರ ವರೆಗಿನ ವೇಳಾಪಟ್ಟಿಯನ್ನ ಬಿಸಿಸಿಐ ಅನೌನ್ಸ್ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೋರಾಟ ನಡೆಸಲಿದೆ.

ಇದನ್ನೂ ಓದಿ: IPL ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಸಾಧಕರು!

ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ ಆಯೋಜಿಸಲಾಗಿದೆ. ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಣದಲ್ಲಿ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. ತವರಿನ RCB ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡಸಲಿದೆ. ಆರಂಭಿಕ ವೇಳಾಪಟ್ಟಿಯ ಅಂತಿಮ ಪಂದ್ಯ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ. ಎಪ್ರಿಲ್ 5 ರಂದು RCB ತಂಡ ಕೋಲ್ಕತ್ತಾ ನೈಟ್ ರೈಡಸ್ಸ್ ವಿರುದ್ದ ಹೋರಾಟ ನಡೆಸಲಿದೆ.

ಇಲ್ಲಿದೆ ಐಪಿಎಲ್ 12ನೇ ಆವೃತ್ತಿಯ ಆರಂಭಿಕ ವೇಳಾಪಟ್ಟಿ:

click me!