ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳಾಪಟ್ಟಿ ಪ್ರಕಟ

By Web DeskFirst Published Oct 21, 2016, 12:36 PM IST
Highlights

ಪುಣೆ, ರಾಂಚಿ ಹಾಗೂ ಧರ್ಮಶಾಲಾ ಕ್ರೀಡಾಂಗಣಗಳಿಗೆ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಯೋಜಿಸುವ ಅವಕಾಶ ದೊರೆತಿದ್ದು, ಸರಣಿಯ ದ್ವಿತೀಯ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ನವದೆಹಲಿ(ಅ.21): ಮುಂದಿನ ವರ್ಷ ಫೆಬ್ರವರಿ 23ರಿಂದ ಆರಂಭಗೊಳ್ಳುವ ‘ಬಾರ್ಡರ್-ಗವಾಸ್ಕರ್ ಟ್ರೋಫಿ’ ಸರಣಿಯ ಅಂಗವಾಗಿ ಭಾರತ-ಆಸ್ಟ್ರೇಲಿಯಾ ನಡುವೆ ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆಗೊಳಿಸಿದೆ.

ಪುಣೆ, ರಾಂಚಿ ಹಾಗೂ ಧರ್ಮಶಾಲಾ ಕ್ರೀಡಾಂಗಣಗಳಿಗೆ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಯೋಜಿಸುವ ಅವಕಾಶ ದೊರೆತಿದ್ದು, ಸರಣಿಯ ದ್ವಿತೀಯ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೊದಲ ಟೆಸ್ಟ್ ಪಂದ್ಯವು ಫೆ. 23ರಿಂದ 27ರವರೆಗೆ ಪುಣೆಯಲ್ಲಿ ನಡೆಯಲಿದ್ದು, ಆನಂತರದ ಪಂದ್ಯ ಮಾ. 4ರಿಂದ 8ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಇನ್ನುಳಿದ ಎರಡು ಪಂದ್ಯಗಳು ಕ್ರಮವಾಗಿ, ರಾಂಚಿ (ಮಾ. 16ರಿಂದ 20) ಹಾಗೂ ಧರ್ಮಶಾಲಾದಲ್ಲಿ (ಮಾ. 25ರಿಂದ 29) ನಡೆಯಲಿದೆ.

ಕಳೆದ ನವೆಂಬರ್‌ನಲ್ಲಿ ಪುಣೆ, ರಾಂಚಿ ಹಾಗೂ ಧರ್ಮಶಾಲಾ ಕ್ರೀಡಾಂಗಣಗಳಿಗೆ ಟೆಸ್ಟ್ ಮಾನ್ಯತೆ ನೀಡಲಾಗಿತ್ತು.

click me!