
ನವದೆಹಲಿ[ಮಾ.25]: 6 ವರ್ಷಗಳ ಹಿಂದೆ ಬಾಂಗ್ಲಾದೇಶದ ಕಲಾವಿದ ಸುಹಾಸ್ ನಹಿಯನ್ ಬಿಡಿಸಿದ್ದ ಬಾರ್ಸಿಲೋನಾ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಚಿತ್ರಕ್ಕೆ ಜೀವ ಬಂದಿದೆ.
2013ರಲ್ಲಿ ಮೆಸ್ಸಿಯನ್ನು ಹಸಿರು ಹಾಗೂ ಬಿಳಿ ಉಡುಪು ತೊಟ್ಟಎದುರಾಳಿಗಳು ನಿಯಂತ್ರಿಸಲು ಯತ್ನಿಸುತ್ತಿರುವ ಚಿತ್ರವನ್ನು ನಹಿಯನ್ ಬಿಡಿಸಿದ್ದರು. ಸ್ಥಳೀಯ ಕ್ರೀಡಾ ವೆಬ್‌ಸೈಟ್‌ವೊಂದರಲ್ಲಿ ಚಿತ್ರ ಪ್ರಕಟಗೊಂಡಿತ್ತು. ಆ ಚಿತ್ರಕ್ಕೆ ಹೋಲುವಂತಹ ಪ್ರಸಂಗ ಇತ್ತೀಚಿನ ಬಾರ್ಸಿಲೀನಾ-ರಿಯಲ್ ಬೆಟಿಸ್ ತಂಡದ ನಡುವಿನ ಪಂದ್ಯದಲ್ಲಿ ನಡೆಯಿತು.
ಆ ಪ್ರಸಂಗವನ್ನು ಛಾಯಾಗ್ರಾಹಕರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಕಲಾವಿದನ ಚಿತ್ರ ಹಾಗೂ ಪಂದ್ಯದ ಫೋಟೋ ಎರಡೂ ವೈರಲ್ ಆಗಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.