IPL 2018: ಡೆವಿಲ್ಸ್ ಎದುರು ಪವಾಡದ ನಿರೀಕ್ಷೆಯಲ್ಲಿ ಆರ್’ಸಿಬಿ

Published : May 12, 2018, 04:33 PM IST
IPL 2018:  ಡೆವಿಲ್ಸ್ ಎದುರು ಪವಾಡದ ನಿರೀಕ್ಷೆಯಲ್ಲಿ ಆರ್’ಸಿಬಿ

ಸಾರಾಂಶ

10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಆರ್'ಸಿಬಿ, ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಇನ್ನುಳಿದ ತಂಡಗಳ ಫಲಿತಾಂಶ ತನಗೆ ಅನುಕೂಲವಾಗುವಂತೆ ಪ್ರಾರ್ಥಿಸಬೇಕಿದೆ.

ನವದೆಹಲಿ(ಮೇ.12): ಪ್ಲೇ-ಆಫ್‌'ಗೇರಲು ಪವಾಡದ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಈಗಾಗಲೇ ಪ್ಲೇ-ಆಫ್ ರೇಸ್‌'ನಿಂದ ಹೊರಬಿದ್ದಿರುವ ಡೆಲ್ಲಿ ಡೇರ್'ಡೆವಿಲ್ಸ್ ವಿರುದ್ಧ ಸೆಣಸಾಡಲಿದೆ. 

10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಆರ್'ಸಿಬಿ, ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಇನ್ನುಳಿದ ತಂಡಗಳ ಫಲಿತಾಂಶ ತನಗೆ ಅನುಕೂಲವಾಗುವಂತೆ ಪ್ರಾರ್ಥಿಸಬೇಕಿದೆ. ಟೂರ್ನಿಯಲ್ಲಿ ತಂಡದ ಪ್ರದರ್ಶನ ನೋಡಿದರೆ, ಪ್ಲೇ-ಆಫ್ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಯೇ ಹೆಚ್ಚು. ತಂಡದ ಪ್ರದರ್ಶನದ ಬಗ್ಗೆ ಸ್ವತಃ ನಾಯಕ ಕೊಹ್ಲಿ ಬೇಸರಗೊಂಡಿದ್ದು, ಕೊನೆ 4 ಪಂದ್ಯಗಳಲ್ಲಾದರೂ ಅಭಿಮಾನಿಗಳ ಮನರಂಜಿಸುವುದು ಆರ್‌ಸಿಬಿ ಗುರಿಯಾಗಿದೆ. ಎಬಿ ಡಿವಿಲಿಯರ್ಸ್‌ ಮೇಲೂ ಸಹ ತಂಡ ಹೆಚ್ಚಿನ ನಿರೀಕ್ಷೆಯಿಟ್ಟಿದೆ. ಮನ್‌ದೀಪ್, ಡಿಕಾಕ್, ಮೆಕ್ಲಲಂ, ವಾಷಿಂಗ್ಟನ್ ಸುಂದರ್ ಎಲ್ಲರೂ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 

ಮತ್ತೊಂದೆಡೆ ಪ್ಲೇ-ಆಫ್‌’ನಿಂದ ಹೊರಬಿದ್ದಿದ್ದರೂ, ಡೆಲ್ಲಿ ಕೊನೆ 3 ಪಂದ್ಯಗಳಲ್ಲಿ ಗೆದ್ದು ಟೂರ್ನಿಗೆ ವಿದಾಯ ಹೇಳುವ ವಿಶ್ವಾಸದಲ್ಲಿದೆ. ಆಡಲು ಅವಕಾಶ ಸಿಗದ ಕೆಲ ಆಟಗಾರರನ್ನು ಮುಂದಿನ ಪಂದ್ಯಗಳಲ್ಲಿ ಆಡಿಸಲು ತಂಡ ಮುಂದಾಗಲಿದೆ.
ಸಂಭಾವ್ಯ ತಂಡ:
DD: ಪೃಥ್ವಿ ಶಾ, ರಾಯ್, ಶ್ರೇಯಸ್(ನಾಯಕ), ರಿಶಭ್, ಹರ್ಷಲ್, ಮ್ಯಾಕ್ಸ್’ವೆಲ್, ವಿಜಯ್ ಶಂಕರ್, ಪ್ಲಂಕೆಟ್, ನದೀಮ್, ಅಮಿತ್ ಮಿಶ್ರಾ, ಟ್ರೆಂಟ್ ಬೌಲ್ಟ್
RCB: ವೋಹ್ರಾ, ಪಾರ್ಥೀವ್, ಕೊಹ್ಲಿ(ನಾಯಕ), ಡಿವಿಲಿಯರ್ಸ್‌, ಮೊಯಿನ್ ಅಲಿ, ಮನ್‌'ದೀಪ್, ಗ್ರಾಂಡ್‌ಹೋಮ್, ಟಿಮ್ ಸೌಥಿ, ಉಮೇಶ್ ಯಾದವ್, ಸಿರಾಜ್, ಚಹಲ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?