ಪಂಚ ಪಾಂಡವರಿಗೆ ಡು ಆರ್ ಡೈ ಸರಣಿ: ಕನ್ನಡಿಗರಿಗೆ ಆಸೀಸ್ ಸರಣಿ ಮಹತ್ವದ್ದು ಯಾಕೆ ಗೊತ್ತಾ..?

Published : Sep 14, 2017, 02:51 PM ISTUpdated : Apr 11, 2018, 01:10 PM IST
ಪಂಚ ಪಾಂಡವರಿಗೆ ಡು ಆರ್ ಡೈ ಸರಣಿ: ಕನ್ನಡಿಗರಿಗೆ ಆಸೀಸ್ ಸರಣಿ ಮಹತ್ವದ್ದು ಯಾಕೆ ಗೊತ್ತಾ..?

ಸಾರಾಂಶ

ಪ್ರತಿ ಸರಣಿ ಬಂದಾಗ ಕೆಲ ಆಟಗಾರರಿಗೆ ಅದು ಡು ಆರ್ ಡೈ ಸಿರೀಸ್ ಆಗಿರುತ್ತೆ. ಈಗ ಆಸ್ಟ್ರೇಲಿಯಾ ಸರಣಿಯೂ ಐವರು ಆಟಗಾರರಿಗೆ ಮಹತ್ವದ್ದಾಗಿದೆ. ಫರ್ಫಾಮೆನ್ಸ್ ಮಾಡದಿದ್ದರೆ ಟೀಂ ಇಂಡಿಯಾದಲ್ಲಿನ ಅವರ ಸ್ಥಾನ ಅಲುಗಾಡಲಿದೆ. ಹಾಗಾದ್ರೆ ಡೇಂಜರ್ ಜೋನ್​ನಲ್ಲಿ ಯಾರಾರಿದ್ದಾರೆ ಅನ್ನೋದನ್ನ ನೀವೇ ನೋಡಿಕೊಂಡು ಬನ್ನಿ.

ಭಾರತ-ಆಸ್ಟ್ರೇಲಿಯಾ ನಡುವಿನ ಸೀಮಿತ ಓವರ್'​ಗಳ ಎರಡು ಸರಣಿಗಳು ಉಭಯ ತಂಡಗಳಿಗೂ ಮಹತ್ವದ್ದು. ಅದರಲ್ಲೂ ಟೀಂ ಇಂಡಿಯಾದಲ್ಲಿರುವ ಐವರು ಆಟಗಾರರಿಗೆ ಏಕದಿನ ಸರಣಿ ವೆರಿ ಇಂಪಾಡೆಂಟ್. ಕಾಂಗರೂಗಳ ವಿರುದ್ಧ ಇವರು ಶೈನ್ ಅದರಷ್ಟೇ ಟೀಮ್​ನಲ್ಲಿ ಇರ್ತಾರೆ. ಫೇಲ್​ ಅದ್ರೆ ಟೀಮ್​ನಿಂದ ಕಿಕೌಟ್ ಆಗ್ತಾರೆ. ಹೀಗಾಗಿ ಅವರಾಡುವ ಪ್ರತಿ ಪಂದ್ಯವೂ ಅವರಿಗೆ ಡು ಆರ್ ಡೈ.

4ನೇ ಕ್ರಮಾಂಕ ಉಳಿಸಿಕೊಳ್ಳಲು ಪಾಂಡೆ ಹೋರಾಟ

ಕರ್ನಾಟಕದ ಯಂಗ್ ಪ್ಲೇಯರ್ ಮನೀಶ್ ಪಾಂಡೆ ಫರ್ಫಾಮೆನ್ಸ್ ಮಾಡಿದರೂ ಟೀಂ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ಪ್ರತಿ ಸರಣಿಯಲ್ಲೂ ಹೋರಾಟ ನಡೆಸಬೇಕಿದೆ. ಶ್ರೀಲಂಕಾ ವಿರುದ್ಧ ಬ್ಯಾಕ್ ಟು ಬ್ಯಾಕ್ ಎರಡು ಉತ್ತಮ ಇನ್ನಿಂಗ್ಸ್ ಆಡಿದ ಪಾಂಡೆಗೆ 4ನೇ ಕ್ರಮಾಂಕ ಫಿಕ್ಸ್ ಆಗಿದೆ. ಆದ್ರೆ ಆಸ್ಟ್ರೇಲಿಯಾ ವಿರುದ್ಧವೂ ಅವರು ಉತ್ತಮ ಪ್ರದರ್ಶನ ನೀಡ್ಬೇಕಿದೆ. ಆಗ ಮಾತ್ರ ಅವರಿಗೆ ಆ ಕ್ರಮಾಂಕ ಖಾಯಂ ಆಗೋದು. ಇಲ್ಲವಾದ್ರೆ ಅವರ ಸ್ಥಾನ ಕಸಿದುಕೊಳ್ಳಲು ಆಟಗಾರರ ದಂಡೇ ಕ್ಯೂನಲ್ಲಿ ನಿಂತಿದೆ.

ಕನ್ನಡಿಗ ರಾಹುಲ್​ಗೆ ಲಾಸ್ಟ್ ಚಾನ್ಸ್

ನಾಯಕ ವಿರಾಟ್ ಕೊಹ್ಲಿ ಕೃಪೆಯಿಂದ ಸಾಕಷ್ಟು ದಿನ ಟೀಂ ಇಂಡಿಯಾದಲ್ಲಿ ಇರಲು ಸಾಧ್ಯವಿಲ್ಲ. ಅದನ್ನ ಕೆಎಲ್ ರಾಹುಲ್ ಬೇಗ ಅರಿತುಕೊಂಡ್ರೆ ಒಳಿತು. ಓಪನರ್ ಆಗಿದ್ದರೂ ಅಲ್ಲಿ ಮೂವರು ಬೆಸ್ಟ್ ಬ್ಯಾಟ್ಸ್​ಮನ್​ಗಳು ಇರೋದ್ರಿಂದ ರಾಹುಲ್​ಗೆ ಮಿಡ್ಲ್ ಆರ್ಡರ್​ನಲ್ಲಿ ಚಾನ್ಸ್ ಕೊಡಲಾಗಿದೆ. ಆದ್ರೆ ಲಂಕಾದಲ್ಲಿ ರಾಹುಲ್ ಫೇಲ್ ಆದ್ರು. ಆಸ್ಟ್ರೇಲಿಯಾ ವಿರುದ್ಧ ಅವರಿಗೆ ಆಡೋ ಚಾನ್ಸ್ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆಸೀಸ್ ವಿರುದ್ಧ ರಾಹುಲ್ ಕ್ಲಿಕ್ ಆದರಷ್ಟೇ ಅವರಿಗೆ ಒಂಡೇ ಟೀಮ್​ನಲ್ಲಿ ಸ್ಥಾನ. ಇಲ್ಲವಾದ್ರೆ ಕಿಕೌಟ್ ಆಗ್ತಾರೆ.

ಜಡೇಜಾ ಸ್ಥಾನ ಕಸಿದುಕೊಳ್ಳಲು ಅಕ್ಷರ್ ಮ್ಯಾಜಿಕ್ ಮಾಡ್ಲೇಬೇಕು

ರೆಸ್ಟ್​ ನೆಪದಲ್ಲಿ ರವೀಂದ್ರ ಜಡೇಜಾ ಅವರನ್ನ ಡ್ರಾಪ್ ಮಾಡಿರೋದು ಗುಟ್ಟಾಗಿ ಏನು ಉಳಿದಿಲ್ಲ. ಜಡ್ಡು ಸ್ಥಾನದಲ್ಲಿ ಆಡುತ್ತಿರುವ ಅಕ್ಷರ್ ಪಟೇಲ್, ಶ್ರೀಲಂಕಾದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದ್ರೆ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳಲು ಆ ಫರ್ಫಾಮೆನ್ಸ್ ಸಾಕಾಗಲ್ಲ. ಮಹತ್ವದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಲ್​ರೌಂಡ್​ ಆಟವಾಡಿದರಷ್ಟೇ ಅಕ್ಷರ್'​​ಗೆ ಟೀಮ್​'ನಲ್ಲಿ ಫರ್ಮನೆಂಟ್ ಪ್ಲೇಸ್. ಇಲ್ಲವಾದ್ರೆ ಜಡೇಜಾ ಮತ್ತೆ ಕಮ್​ಬ್ಯಾಕ್ ಮಾಡಿಬಿಡ್ತಾರೆ.

ಟೆಸ್ಟ್​​ನಂತೆ ಒಂಡೇಯಲ್ಲೂ ಕ್ಲಿಕ್ ಆಗ್ಬೇಕು ಉಮೇಶ್

ಫಾಸ್ಟ್ ಬೌಲರ್ ಉಮೇಶ್ ಯಾದವ್​'ಗೆ ಟೆಸ್ಟ್​ ತಂಡದಲ್ಲಿ ಖಾಯಂ ಸ್ಥಾನವಿದೆ. ಆದ್ರೆ ಏಕದಿನ ಸರಣಿಗಳಲ್ಲಿ ಅವರಿಗೆ ಖಾಯಂ ಸ್ಥಾನವಿಲ್ಲ. ಒಂದು ಸರಣಿಯಲ್ಲಿ ಆಡಿದ್ರೆ ಮತ್ತೊಂದು ಸರಣಿಗೆ ವಿಶ್ರಾಂತಿ ನೀಡಲಾಗುತ್ತೆ. ಸೀಮಿತ ಓವರ್​ಗಳ ತಂಡದಲ್ಲೂ ಅವರಿಗೆ ಖಾಯಂ ಸ್ಥಾನ ಬೇಕು ಅಂದ್ರೆ ಕಾಂಗರೂಗಳ ಬೇಟೆಯಾಡ್ಲೇ ಬೇಕು. ಲಂಕಾ ಸಿರೀಸ್'​ನಿಂದ ಮಿಸ್ ಆಗಿದ್ದ ಯಾದವ್, ಈಗ ಆಸೀಸ್ ಸಿರೀಸ್​'ನಲ್ಲಿ ಕಾಣಿಸಿಕೊಳ್ತಿದ್ದಾರೆ.

ಫಾರ್ಮ್​-ಫಿಟ್ನೆಸ್​ಗಾಗಿ ಶಮಿ ಹೋರಾಟ

ಮೂರು ಮಾದರಿ ಕ್ರಿಕೆಟ್​ನಲ್ಲೂ ಆಡುವ ಸಾಮರ್ಥ್ಯ ಮೊಹಮ್ಮದ್ ಶಮಿಗೆ ಇದೆ. ಆದ್ರೆ ಅವರಿಗೆ ಫಾರ್ಮ್​ ಸಮಸ್ಯೆಯಲ್ಲ. ಬದಲಿಗೆ ಫಿಟ್ನೆಸ್​ ಸಮಸ್ಯೆ. ಪದೇಪದೇ ಇಂಜುರಿಯಾಗಿ ಟೀಮ್​ನಿಂದ ಹೊರಗುಳಿಯುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಲಂಕಾ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಆಸ್ಟ್ರೇಲಿಯಾ ಸರಣಿಯಲ್ಲಿನ ಫರ್ಫಾಮೆನ್ಸ್  ಶಮಿ ಕೆರಿಯರ್ ಚೇಂಜ್ ಮಾಡಲಿದೆ. ಹೀಗಾಗಿ ಕಾಂಗರೂ ವಿರುದ್ಧದ ಸಿರೀಸ್ ಶಮಿಗೆ ಮಹತ್ವದ್ದಾಗಿದೆ.

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಕಾಂಪಿಟೇಶನ್ ಶುರುವಾಗಿದೆ. ಒಂದು ಸರಣಿಯಲ್ಲಿ ವಿಫಲವಾದ್ರೆ ಸಾಕು ಆ ಸ್ಥಾನಕ್ಕೆ ಐದಾರು ಆಟಗಾರರು ರೆಡಿ ಇರ್ತಾರೆ. ಈಗ ಅದೇ ಆಗಿರೋದು. ಈ ಐವರು ಆಟಗಾರರು ಡು ಆರ್ ಡೈ ಸ್ಥಿತಿಯಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋ ಟು ಹೆಲ್, ಗೆಳತಿಯೊಂದಿಗೆ ಡಿನ್ನರ್ ಡೇಟ್ ವೇಳೆ ಫ್ಯಾನ್ಸ್ ಬೈಗುಳ, ಹಾರ್ದಿಕ್ ಪಾಂಡ್ಯ ಮಾಡಿದ್ದೇನು?
ತಿರುಪತಿಗೆ ತಿರುಮಲನಿಗೆ ಮುಡಿ ಕೊಟ್ಟ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್