ಆಸ್ಟ್ರೇಲಿಯನ್ ಓಪನ್: ಸೆರೆನಾ ಔಟ್

By Web Desk  |  First Published Jan 24, 2019, 11:47 AM IST

ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ಜೋಕೋವಿಚ್, ಕೇ ನಿಶಿಕೋರಿ ವಿರುದ್ಧ ಗೆದ್ದು ಸೆಮೀಸ್‌ಗೇರಿದರು. ರೋನಿಕ್ ಮಣಿಸಿದ ಲುಕಾಸ್ ಉಪಾಂತ್ಯಕ್ಕೇರಿದರು.

ಮೆಲ್ಬರ್ನ್[ಜ.24]: ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂನಲ್ಲಿ ಅಚ್ಚರಿಯ ಫಲಿತಾಂಶಗಳು ಹೊರಬೀಳುತ್ತಿವೆ.

ತಾರಾ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಕ್ವಾರ್ಟರ್‌ನಲ್ಲಿ ಮುಗ್ಗರಿಸಿದರು. ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಜಯಿಸುವ ಗುರಿ ಹೊತ್ತು ಕಣಕ್ಕಿಳಿದಿದ್ದ ಸೆರೆನಾ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 4-6, 6-4, 5-7 ಸೆಟ್’ಗಳಲ್ಲಿ ಸೋತರು. ಪಂದ್ಯದ ವೇಳೆ ಸೆರೆನಾ ಹಿಮ್ಮಡಿ ನೋವಿಗೆ ತುತ್ತಾದರು. ಮತ್ತೊಂದು ಸೆಮೀಸ್‌ನಲ್ಲಿ ಜಪಾನ್‌ನ ಒಸಾಕ, ಉಕ್ರೇನ್‌ನ ಎಲಿನಾ ವಿರುದ್ಧ ಗೆದ್ದರು. 

Tap to resize

Latest Videos

ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ಜೋಕೋವಿಚ್, ಕೇ ನಿಶಿಕೋರಿ ವಿರುದ್ಧ ಗೆದ್ದು ಸೆಮೀಸ್‌ಗೇರಿದರು. ರೋನಿಕ್ ಮಣಿಸಿದ ಲುಕಾಸ್ ಉಪಾಂತ್ಯಕ್ಕೇರಿದರು.

click me!