ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾತಾಳಕ್ಕಿಳಿದ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ

First Published Jun 18, 2018, 11:42 AM IST
Highlights

ಏಕದಿನ ಮಾದರಿಯಲ್ಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ. ಒಂದೆಡೆ ಬಾಲ್ ಟ್ಯಾಂಪರಿಂಗ್‌ನಿಂದಾಗಿ ವಿಶ್ವದಲ್ಲೇ ತಲೆತಗ್ಗಿಬೇಕಾಗಿ ಬಂದ ಆಸ್ಟ್ರೇಲಿಯಾ ಇದೀಗ ರ‍್ಯಾಂಕಿಂಗ್‌ನಲ್ಲೂ ಹಿನ್ನಡೆ ಅನುಭವಿಸಿದೆ.

ಬೆಂಗಳೂರು(ಜೂ.18): ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡ ಇದೀಗ ಕಠಿಣ ಪರಿಸ್ಥಿತಿಯನ್ನ ಎದುರಿಸುತ್ತಿದೆ. ಬಾಲ್ ಟ್ಯಾಂಪರಿಂಗ್‌ನಿಂದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಿಷೇಧ, ತಂಡದ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತಿದೆ. ಸ್ಮಿತ್ ಹಾಗೂ ವಾರ್ನರ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 0-2 ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ ತಂಡ ಇದೀಗ ಏಕದಿನ ರ‍್ಯಾಂಕಿಂಗ್‌ನಲ್ಲೂ ಕುಸಿತ ಕಂಡಿದೆ.  

ಐಸಿಸಿ ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಆಸ್ಟ್ರೇಲಿಯಾ 6ನೇ ಸ್ಥಾನಕ್ಕೆ  ಕುಸಿದಿದೆ. 102 ರೇಟಿಂಗ್ ಹೊಂದಿರುವ ಆಸ್ಟ್ರೇಲಿಯಾ ತಂಡವನ್ನ ಹಿಂದಿಕ್ಕಿರುವ ಪಾಕಿಸ್ತಾನ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ತಂಡದ ಸೋಲು ಹಾಗೂ ರ‍್ಯಾಂಕಿಂಗ್ ಕುಸಿತ ನೂತನ ಕೋಚ್ ಜಸ್ಟಿನ್ ಲ್ಯಾಂಗರ್ ಹಾಗೂ ನಾಯಕ ಟಿಮ್ ಪೈನೆ ತಲೆ ನೋವು ಹೆಚ್ಚಿಸಿದೆ.

ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಮೊದಲ ಸ್ಥಾನ ಅಲಂಕರಿಸಿದೆ. ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಸರಣಿ ಗೆಲುವು ದಾಖಲಿಸಿದ್ದರೆ, ಮತ್ತೆ ನಂಬರ್.1 ಪಟ್ಟ ಅಲಂಕರಿಸೋ ಅವಕಾಶಗಳಿವೆ.

click me!