ಫ್ರೆಂಚ್ ಓಪನ್ ಸೋಲಿನಿಂದ ಚೇತರಿಸಿಕೊಂಡ ಜೊಕೋವಿಚ್ ಇಂದು ಕಣಕ್ಕೆ

First Published Jun 18, 2018, 10:54 AM IST
Highlights

ಫ್ರೆಂಚ್ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಸರ್ಬಿಯಾದ ನೋವಾಕ್ ಜೋಕೋವಿಚ್ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಂದಿನಿಂದ ಆರಂಭವಾಗಲಿರುವ ಕ್ವೀನ್ಸ್ ಕ್ಲಬ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಲಂಡನ್(ಜೂ.18): ವಿಶ್ವದ ಮಾಜಿ ನಂ.1 ಬ್ರಿಟನ್‌ನ ಆ್ಯಂಡಿ ಮರ್ರೆ ಹಾಗೂ ಸರ್ಬಿಯಾದ ನೋವಾಕ್ ಜೋಕೋವಿಚ್, ಸೋಮವಾರದಿಂದ ಆರಂಭವಾಗಲಿರುವ ಕ್ವೀನ್ಸ್ ಕ್ಲಬ್ ಚಾಂಪಿಯನ್ ಶಿಪ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್‌ಗೆ ಈ ಟೂರ್ನಿ ಆಟಗಾರರ ತಯಾರಿ ನಡೆಸಲು ವೇದಿಕೆಯಾಗಿದೆ.

ಮರ್ರೆ ಆರಂಭಿಕ ಸುತ್ತಿನಲ್ಲಿ ಆಸ್ಟ್ರೇಲಿಯಾದ ನಿಕ್ ಕರಿಯೋಸ್‌ರನ್ನು ಎದುರಿಸಲಿದ್ದಾರೆ. ಸರ್ಬಿಯಾದ ಜೋಕೋವಿಚ್ ಮತ್ತು ಸ್ವಿಜರ್‌ಲೆಂಡ್‌ನ ಸ್ಟಾನ್ ವಾವ್ರಿಂಕ ಜೋಡಿ ಪುರುಷರ ಡಬಲ್ಡ್‌ನ ಮೊದಲ ಸುತ್ತಿನಲ್ಲಿ ಸ್ಪೇನ್‌ನ ಫೆರ್ನಾಂಡೋ ವಾರ್ಡೆಸ್ಕೋ ಮತ್ತು ಚೆಕ್ ರಿಪಬ್ಲಿಕ್‌ನ ಥಾಮಸ್ ಬೆರ್ಡಿಚ್ ಜೋಡಿ ಎದುರು ಸೆಣಸಲಿದ್ದಾರೆ.

ಸೊಂಟದ ನೋವಿನಿಂದ ಬಳಲಿದ್ದ ಮರ್ರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ 2017ರ ಯುಎಸ್ ಓಪನ್ ಮತ್ತು ವರ್ಷಾರಂಭದ ಆಸ್ಟ್ರೇಲಿಯನ್ ಓಪನ್‌ನಿಂದ ಹಿಂದೆ ಸರಿದಿದ್ದರು. ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಮಾರ್ಕೊ ಸೆಚಿನಾಟೊ ವಿರುದ್ಧ ಸೋಲನುಭವಿಸಿದ್ದ ಜೋಕೋವಿಚ್ ಕೂಡ ಕ್ವೀನ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

click me!