ಮೂರು ದಶಕಗಳ ಬಳಿಕ ಕಳಪೆ ಸ್ಥಾನಕ್ಕೆ ಕುಸಿಯುವ ಭೀತಿಯಲ್ಲಿ ಆಸ್ಟ್ರೇಲಿಯಾ...!

By Suvarna Web DeskFirst Published Aug 31, 2017, 5:54 PM IST
Highlights

ಕಡೆಯ ಬಾರಿಗೆ 1988ರ ಜುಲೈನಲ್ಲಿ ಅಲನ್ ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡವು ಆರನೇ ಸ್ಥಾನಕ್ಕೆ ಕುಸಿದಿತ್ತು.

ದಶಕಗಳ ಕಾಲ ವಿಶ್ವ ಕ್ರಿಕೆಟ್ ಅನ್ನು ಆಳಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸುಮಾರು ಮೂರು ದಶಕಗಳ ಬಳಿಕ ಕಳಪೆ ಶ್ರೇಯಾಂಕಕ್ಕೆ ಕುಸಿಯುವ ಭೀತಿಯಲ್ಲಿದೆ.

ಹೌದು, ಸ್ಟೀವ್ ಸ್ಮಿತ್ ಪಡೆ ಬಾಂಗ್ಲಾದೇಶ ವಿರುದ್ಧದ ಡಾಕಾ ಟೆಸ್ಟ್'ನಲ್ಲಿ ರೋಚಕ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಪರಿಷ್ಕೃತ ಐಸಿಸಿ ಶ್ರೇಯಾಂಕ ಪಟ್ಟಿಯು ಟೆಸ್ಟ್ ಸರಣಿ ಮುಕ್ತಾಯದ ಬಿಡುಗಡೆಯಾಗಲಿದೆ.

ಪ್ರಸ್ತುತ ನಾಲ್ಕನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿರುವ ಆಸ್ಟ್ರೇಲಿಯಾ ಚಿತ್ತಗಾಂಗ್'ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್'ನಲ್ಲೂ ಮುಖಭಂಗ ಅನುಭವಿಸಿದರೆ 1988ರ ಬಳಿಕ ಮತ್ತೆ ಆರನೇ ಸ್ಥಾನಕ್ಕೆ ಕುಸಿಯಲಿದೆ.

ಒಂದು ವೇಳೆ ಎರಡನೇ ಟೆಸ್ಟ್'ನಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿದರೆ ಇಲ್ಲವೇ ಡ್ರಾ ಸಾಧಿಸಿದರೆ ಐದನೇ ಸ್ಥಾನದಲ್ಲೇ ಉಳಿಯಲಿದೆ

ಕಡೆಯ ಬಾರಿಗೆ 1988ರ ಜುಲೈನಲ್ಲಿ ಅಲನ್ ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡವು ಆರನೇ ಸ್ಥಾನಕ್ಕೆ ಕುಸಿದಿತ್ತು.

click me!