
ನವದೆಹಲಿ: ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ರಿಯೊ ಒಲಿಂಪಿಕ್ಸ್‌ಗೆ ತೆರಳುವ ಅವಕಾಶವನ್ನು ಕಳೆದುಕೊಂಡಿದ್ದ ಹರ್ಯಾಣದ 200 ಮೀಟರ್ ರನ್ನರ್ ಧರಮ್‌ವೀರ್ ಸಿಂಗ್‌ಗೆ ರಾಷ್ಟ್ರೀಯ ಉದ್ದೀಪನಾ ತಡೆ ಘಟಕ (ನಾಡಾ) ಎಂಟು ವರ್ಷ ನಿಷೇಧ ಹೇರಿದೆ.
ರಿಯೊ ಒಲಿಂಪಿಕ್ಸ್ ಅರ್ಹತೆಗಾಗಿ ಜುಲೈ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಇಂಡಿಯನ್ ಗ್ರ್ಯಾಂಡ್‌ಪ್ರಿಕ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಧರಮ್‌ವೀರ್ ಸಿಂಗ್ ಚಾಂಪಿಯನ್ ಆಗಿದ್ದರಾದರೂ, ಅವರು ಕ್ರಮಿಸಿದ ವೇಗದ ಕಾಲಮಿತಿ ಎಲ್ಲರನ್ನೂ ದಿಗ್ಮೂಢಗೊಳಿಸಿತ್ತು. ಬಳಿಕ ಅವರನ್ನು ಉದ್ದೀಪನಾ ಮದ್ದು ಪರೀಕ್ಷೆಗೊಳಪಡಿಸಲಾಗಿತ್ತು. ನಿರೀಕ್ಷೆಯಂತೆ ಅವರು ನಿಷೇತ ರಾಸಾಯನಿಕಗಳನ್ನು ಸೇವಿಸಿರುವುದು ಸಾಬೀತಾಗಿದ್ದರಿಂದ ಅವರು ಕೂಟದಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಹಿಂಪಡೆಯಲಾಗಿತ್ತಲ್ಲದೆ, ಪ್ರತಿಷ್ಠಿತ ರಿಯೊ ಟಿಕೆಟ್ ಕೂಡ ಕೈತಪ್ಪಿತ್ತು.
ವೃತ್ತಿಜೀವನದಲ್ಲಿ ಎರಡನೇ ಬಾರಿ ಇಂಥ ಪ್ರಕರಣದಲ್ಲಿ ಅವರು ಸಿಲುಕಿರುವುದರಿಂದಾಗಿ ಅವರಿಗೆ ಎಂಟು ವರ್ಷಗಳ ನಿಷೇಧ ಹೇರಲಾಗಿದೆ ಎಂದು ನಾಡಾ ಅಕಾರಿಗಳು ತಿಳಿಸಿರುವುದಾಗಿ ‘ಟೈಮ್ಸ್ ಆ್ ಇಂಡಿಯಾ’ ಹೇಳಿದೆ. ಈ ಹಿಂದೆ, 2012ರಲ್ಲಿ ನಡೆದಿದ್ದ ರಾಷ್ಟ್ರೀಯ ಅಂತರ-ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಧರಮ್‌ವೀರ್ 100 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದರು. ಆದರೆ, ಆಗಲೂ ಅವರು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅವರು ನಪಾಸಾಗಿದ್ದರು. ಹಾಗಾಗಿ, ಕ್ರೀಡಾಕೂಟದಲ್ಲಿ ಅವರು ಗೆದ್ದಿದ್ದ ಚಿನ್ನವನ್ನು ಹಿಂಪಡೆಯಲಾಗಿತ್ತು.
(ಕನ್ನಡಪ್ರಭ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.