ಚಿನ್ನದ ಹುಡುಗಿ ಹಿಮಾ ದಾಸ್‌ಗೆ ತೆಂಡುಲ್ಕರ್ ಸ್ಪೆಷಲ್ ಗಿಫ್ಟ್!

Published : Sep 28, 2018, 04:01 PM ISTUpdated : Sep 28, 2018, 08:32 PM IST
ಚಿನ್ನದ ಹುಡುಗಿ ಹಿಮಾ ದಾಸ್‌ಗೆ ತೆಂಡುಲ್ಕರ್ ಸ್ಪೆಷಲ್ ಗಿಫ್ಟ್!

ಸಾರಾಂಶ

ಅಸ್ಸಾಂ ಓಟಗಾರ್ತಿ ಹಿಮಾ ದಾಸ್ ಇದೀಗ ಭಾರತೀಯರ ನೆಚ್ಚಿನ ಕ್ರೀಡಾಪಟು. ಓಟದಲ್ಲಿ ಸಾಧನೆಯ ಶಿಖರವೇರಿದ ಹಿಮಾ ದಾಸ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭೇಟಿಯಾಗಿದ್ದಾರೆ. ಈ ವೇಳೆ ಸಚಿನ್ ವಿಶೇಷ ಉಡುಗೊರೆ ನೀಡಿದ್ದಾರೆ.

ಮುಂಬೈ(ಸೆ.28): ಭಾರತದ ಓಟಗಾರ್ತಿ ಹಿಮಾ ದಾಸ್ ಇದೀಗ ಚಿನ್ನದ ಹುಡುಗಿ ಎಂದೇ ಪ್ರಸಿದ್ಧಿ. ಇಂಡೋನೇಷಿಯಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಹಿಮಾ ದಾಸ್  ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ.  ಇದೀಗ ಹಿಮಾ ದಾಸ್  ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಭೇಟಿಯಾಗಿದ್ದಾರೆ. 

ಅಸ್ಸಾಂನ ಪುಟ್ಟ ಹಳ್ಳಿಯಿಂದ ಬಂದು ಸಾಧನೆ ಶಿಖರವೇರಿದ ಹಿಮಾ ದಾಸ್, ತನ್ನ ದಿಗ್ಗಜ ಕ್ರೀಡಾಪಟು, ಸ್ಪೂರ್ತಿಯ  ಚಿಲುಮೆ ಸಚಿನ್ ಭೇಟಿ ಮಾಡಿರುವುದ ಎಲ್ಲಿಲ್ಲ ಖುಷಿ ನೀಡಿದೆ ಎಂದಿದ್ದಾರೆ. ಈ ವೇಳೆ ಸಚಿನ್ ತೆಂಡುಲ್ಕರ್ ಸಹಿ ಮಾಡಿದ ಕ್ರಿಕೆಟ್ ಜರ್ಸಿ ಉಡುಗೊರೆಯಾಗಿ ನೀಡಿದ್ದಾರೆ.

 

 

ಸಚಿನ್ ಜೊತೆಗಿನ ಭೇಟಿಯನ್ನ ಹಿಮಾ ದಾಸ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಹಿಮಾ ದಾಸ್ ಸಾಧನೆ ಪರಿಗಣಿಸಿ ಅಸ್ಸಾಂ ಸರ್ಕಾರ ರಾಜ್ಯದ ಕ್ರೀಡಾ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ.  

 

ಇದನ್ನೂ ಓದಿ: ಆ್ಯಡಿಡಾಸ್ ಶೂ ಮೇಲೆ ಹಿಮಾದಾಸ್ ಹೆಸರು..!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ