ಏಷ್ಯನ್ ವೇಟ್’ಲಿಫ್ಟಿಂಗ್: ಚಾನು ಕೈತಪ್ಪಿದ ಕಂಚು..!

By Web DeskFirst Published Apr 22, 2019, 11:26 AM IST
Highlights

ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ಒಟ್ಟು 199 ಕೆ.ಜಿ (ಸ್ಯ್ನಾಚ್’ನಲ್ಲಿ 86 ಕೆ.ಜಿ + ಕ್ಲೀನ್‌ ಅಂಡ್‌ ಜರ್ಕ್’ನಲ್ಲಿ 113 ಕೆ.ಜಿ) ಭಾರ ಎತ್ತಿ 4ನೇ ಸ್ಥಾನ ಪಡೆದರು. ಚೀನಾದ ಝಾಂಗ್‌ ರೊಂಗ್‌ ಸಹ 199 ಕೆ.ಜಿ (88 ಕೆ.ಜಿ+ 111 ಕೆ.ಜಿ) ಭಾರ ಎತ್ತಿದರು.

ನಿಗ್ಬೊ(ಚೀನಾ): ಮಾಜಿ ವಿಶ್ವ ಚಾಂಪಿಯನ್‌ ಮೀರಾಬಾಯಿ ಚಾನು ಇಲ್ಲಿ ನಡೆಯುತ್ತಿರುವ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕದಿಂದ ವಂಚಿತರಾಗಿದ್ದಾರೆ. ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ಒಟ್ಟು 199 ಕೆ.ಜಿ (ಸ್ಯ್ನಾಚ್’ನಲ್ಲಿ 86 ಕೆ.ಜಿ + ಕ್ಲೀನ್‌ ಅಂಡ್‌ ಜರ್ಕ್’ನಲ್ಲಿ 113 ಕೆ.ಜಿ) ಭಾರ ಎತ್ತಿ 4ನೇ ಸ್ಥಾನ ಪಡೆದರು. ಚೀನಾದ ಝಾಂಗ್‌ ರೊಂಗ್‌ ಸಹ 199 ಕೆ.ಜಿ (88 ಕೆ.ಜಿ+ 111 ಕೆ.ಜಿ) ಭಾರ ಎತ್ತಿದರು. ಆದರೆ ಟೈ ಬ್ರೇಕರ್‌ ನಿಯಮದ ಪ್ರಕಾರ ಸ್ಯ್ನಾಚ್’ನಲ್ಲಿ ಹೆಚ್ಚು ತೂಕ ಎತ್ತಿದವರಿಗೆ ಉನ್ನತ ಸ್ಥಾನ ಸಿಗಲಿದೆ. ಹೀಗಾಗಿ 3ನೇ ಸ್ಥಾನ ಪಡೆದ ಝಾಂಗ್‌ ಕಂಚು ಜಯಿಸಿದರು. ಚಾನು ಕ್ಲೀನ್‌ ಅಂಡ್‌ ಜರ್ಕ್ನ 3ನೇ ಯತ್ನದಲ್ಲಿ 115 ಕೆ.ಜಿ ಎತ್ತುವಲ್ಲಿ ವಿಫಲರಾದರು. ಒಂದೊಮ್ಮೆ ಯಶಸ್ವಿಯಾಗಿದ್ದರೆ ಬೆಳ್ಳಿ ಪದಕ ಸಿಗುತ್ತಿತ್ತು.

ಇದೇ ವೇಳೆ ಪುರುಷರ 67 ಕೆ.ಜಿ ವಿಭಾಗದಲ್ಲಿ 16 ವರ್ಷದ ಜೆರಿಮಿ ಲಾಲ್ರಿನುಂಗಾ ಬರೋಬ್ಬರಿ 15 ದಾಖಲೆಗಳನ್ನು ಮುರಿದರು. 6 ಅಂತಾರಾಷ್ಟ್ರೀಯ (3 ಕಿರಿಯರ ವಿಶ್ವ, 3 ಕಿರಿಯರ ಏಷ್ಯನ್‌), 9 ರಾಷ್ಟ್ರೀಯ (3 ಕಿರಿಯರ, 3 ಬಾಲಕರ ಹಾಗು 3 ಹಿರಿಯ) ದಾಖಲೆಗಳನ್ನು ಮುರಿದರು. 

ಒಟ್ಟು 279 ಕೆ.ಜಿ(130+163 ಕೆ.ಜಿ) ಭಾರ ಎತ್ತುವ ಮೂಲಕ ‘ಬಿ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಜೆರಿಮಿ, ಫೈನಲ್‌ ಪ್ರವೇಶಿಸಿ ಪದಕ ಗೆಲ್ಲಲು ಕಾತರಿಸುತ್ತಿದ್ದಾರೆ.

click me!