ಇಂದಿ​ನಿಂದ ಬೆಂಗಳೂ​ರಲ್ಲಿ ಏಷ್ಯನ್‌ ಈಜು ಕೂಟ

By Kannadaprabha News  |  First Published Sep 24, 2019, 10:55 AM IST

10ನೇ ಏಷ್ಯನ್‌ ಏಜ್‌ ಗ್ರೂಪ್‌ ಈಜು ಚಾಂಪಿಯನ್‌ಶಿಪ್‌ ಕೂಟಕ್ಕೆ ಬೆಂಗಳೂರು ಆತಿಥ್ಯ ವಹಿಸಿದ್ದು, ಇಂದಿನಿಂದ ಪಂದ್ಯಾವಳಿಗಳು ಆರಂಭವಾಗಲಿವೆ. ಭಾರತೀಯ ಸ್ವಿಮ್ಮರ್‌ಗಳು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಲು ಎದುರು ನೋಡುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...  


ಬೆಂಗಳೂರು[ಸೆ.24]: ಇಂದಿನಿಂದ ಅ.2ರ ವರೆಗೆ 10ನೇ ಏಷ್ಯನ್‌ ಏಜ್‌ ಗ್ರೂಪ್‌ ಈಜು ಚಾಂಪಿಯನ್‌ಶಿಪ್‌ ಬೆಂಗ​ಳೂ​ರಲ್ಲಿ ನಡೆಯಲಿದೆ. 20 ವರ್ಷಗಳ ಬಳಿಕ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಏಷ್ಯನ್‌ ಈಜು ಕೂಟ ಆಯೋಜಿಸಲಾಗುತ್ತಿದೆ. 

2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಲು ಅತ್ಯುತ್ತಮ ಅವಕಾಶ ಇದಾ​ಗಿ​ದೆ. ನಗ​ರದ ಪಡುಕೋಣೆ - ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್ ಎಕ್ಸಲೆನ್ಸ್‌, ಭಾರ​ತೀಯ ಕ್ರೀಡಾ ಪ್ರಾಧಿ​ಕಾರ (ಸಾಯ್‌) ಬೆಂಗ​ಳೂರು ಕೇಂದ್ರ, ಹಲ​ಸೂ​ರಿನ ಕೆನ್ಸಿಂಗ್ಟನ್‌ ಈಜು ಕೇಂದ್ರ ಕೂಟದ ಆತಿಥ್ಯ ವಹಿಸುತ್ತಿವೆ. 28 ರಾಷ್ಟ್ರಗಳ 1000ಕ್ಕೂ ಹೆಚ್ಚು ಸ್ಪರ್ಧಿ​ಗಳು ಪಾಲ್ಗೊ​ಳ್ಳು​ತ್ತಿದ್ದು, 18 ವರ್ಷ ಹಾಗೂ ಮೇಲ್ಪಟ್ಟ(ಮುಕ್ತ ವಿಭಾಗ), 15ರಿಂದ 17 ವರ್ಷ, ಅಂಡರ್‌-14 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

Tap to resize

Latest Videos

ಏಷ್ಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್; ಬೆಂಗಳೂರಲ್ಲಿ ಲೋಗೋ ಅನಾವರಣ!

ಈಜು, ವಾಟರ್‌ ಪೋಲೋ ಹಾಗೂ ಡೈವಿಂಗ್‌, ಆರ್ಟಿ​ಸ್ಟಿಕ್‌ ಈಜು ಸ್ಪರ್ಧೆ​ಗಳು ನಡೆ​ಯ​ಲಿವೆ. ಈಜು ವಿಭಾ​ಗ​ದಲ್ಲಿ ಭಾರ​ತದ 44 ಈಜು​ಪ​ಟು​ಗಳು ಸ್ಪರ್ಧಿ​ಸ​ಲಿದ್ದು, ವಾಟರ್‌ ಪೋಲೋ, ಡೈವಿಂಗ್‌ ಸೇರಿ​ಸಿ​ದರೆ ಒಟ್ಟು ಸಂಖ್ಯೆ 86ಕ್ಕೇರ​ಲಿದೆ.

9 ದಿನ​ಗಳ ಕಾಲ ನಡೆ​ಯ​ಲಿ​ರುವ ಕೂಟದಲ್ಲಿ ಭಾರತ, ಜಪಾನ್‌, ಚೀನಾ, ಚೈನೀಸ್‌ ತೈಪೆ, ಹಾಂಕಾಂಗ್‌, ಥಾಯ್ಲೆಂಡ್‌, ಕಜ​ಕ​ಸ್ತಾನ, ಇರಾನ್‌, ಕತಾರ್‌, ಜೊರ್ಡನ್‌, ಕುವೈತ್‌, ಕಿರ್ಗಿ​ಸ್ತಾ​ನ, ಮಾಲ್ಡೀವ್‌್ಸ, ನೇಪಾಳ, ಒಮಾನ್‌, ಸೌದಿ ಅರೇ​ಬಿಯಾ, ಟರ್ಕ್​ಮೇ​ನಿ​ಸ್ತಾನ, ಯುಎಇ, ಉಜ್ಬೇ​ಕಿ​ಸ್ತಾನ, ವಿಯೆಟ್ನಾಂ, ಥಾಯ್ಲೆಂಡ್‌, ಶ್ರೀಲಂಕಾ, ದ.ಕೊ​ರಿಯಾ, ಫಿಲಿ​ಪೈನ್ಸ್‌, ಇಂಡೋ​ನೇಷ್ಯಾ, ಸಿಂಗಾ​ಪುರ್‌, ಬಾಂಗ್ಲಾ​ದೇಶ ಹಾಗೂ ಸಿರಿ​ಯಾದ ಸ್ಪರ್ಧಿ​ಗಳು ಪಾಲ್ಗೊ​ಳ್ಳ​ಲಿ​ದ್ದಾರೆ.

ಏಷ್ಯನ್‌ ಈಜು ಚಾಂಪಿಯನ್‌ಶಿಪ್: ಬೆಂಗಳೂರು ಆತಿಥ್ಯ

ಭಾರತ ತಂಡದ ಸವಾ​ಲನ್ನು ಅನು​ಭವಿ ಈಜು​ಪಟು ಸಾಜನ್‌ ಪ್ರಕಾಶ್‌ ಮುನ್ನ​ಡೆ​ಸ​ಲಿ​ದ್ದಾರೆ. ವೀರ್‌ಧವಳ್‌ ಖಾಡೆ, ಕರ್ನಾ​ಟ​ಕದ ಶ್ರೀಹರಿ ನಟ​ರಾ​ಜ್‌, ಮಾನಾ ಪಟೇಲ್‌, ಶಿವಾನಿ ಕಟಾ​ರಿ​ಯಾ ಸೇರಿ​ದಂತೆ ಇನ್ನೂ ಅನೇಕ ತಾರಾ ಈಜು​ಪ​ಟು​ಗಳು ಪದಕ ಭರ​ವಸೆ ಮೂಡಿ​ಸಿ​ದ್ದಾರೆ. ಜತೆಗೆ 2020ರ ಟೋಕಿ​ಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆ​ಯುವ ವಿಶ್ವಾಸದಲ್ಲಿ​ದ್ದಾರೆ. ಕಳೆದ ಆವೃ​ತ್ತಿ​ಯಲ್ಲಿ ಭಾರತ ಈಜಿನಲ್ಲಿ 40, ಡೈವಿಂಗ್‌ನಲ್ಲಿ 9 ಪದ​ಕ​ಗ​ಳನ್ನು ಗೆದ್ದು​ಕೊಂಡಿತ್ತು.

ಟೋಕಿಯೋ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸುವುದು ನಮ್ಮ ಗುರಿ. 50 ಮೀ., 100 ಮೀ., ಫ್ರೀಸ್ಟೈಲ್‌, 50 ಮೀ. ಬಟರ್‌ಫ್ಲೈನಲ್ಲಿ ಸ್ಪರ್ಧಿಸುತ್ತಿದ್ದೇನೆ. ಪತ್ನಿ ರುಜುತಾ 50 ಮೀ. ಫ್ರೀಸ್ಟೈಲ್‌ ಸ್ಪರ್ಧಿಸುತ್ತಿದ್ದಾಳೆ. ಉತ್ತಮ ತಯಾರಿ ನಡೆ​ಸಿದ್ದು, ಪದಕ ಗೆಲ್ಲು​ವ ವಿಶ್ವಾಸವಿದೆ.

- ವೀರ್‌ಧವಳ್‌ ಖಾಡೆ, ಭಾರ​ತದ ಈಜುಪಟು
 

click me!