ಹಾಲಿ ಚಾಂಪಿಯನ್ ಭಾರತ ಮೊದಲಾರ್ಧದ ಆರಂಭದಲ್ಲೇ 8-6ರ ಮುನ್ನಡೆ ಕಾಯ್ದುಕೊಂಡಿತ್ತು. ಆ ಬಳಿ ಆಕ್ರಮಣಕಾರಿಯಾಟವಾಡಿದ ಭಾರತ ರೈಡಿಂಗ್ ಹಾಗೂ ಡಿಫೆನ್ಸ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರುವುದರೊಂದಿಗೆ 19-8 ಅಂಕಗಳೊಂದಿಗೆ ಮೊದಲಾರ್ಧ ಮುಕ್ತಾಯಗೊಳಿಸಿತು.
ಜಕಾರ್ತ್[ಆ.19]: ಪಾಯಲ್ ಚೌಧರಿ ನೇತೃತ್ವದ ಭಾರತೀಯ ವನಿತೆಯ ಕಬಡ್ಡಿ ತಂಡ ಜಪಾನ್ ತಂಡವನ್ನು ಅನಾಯಾಸವಾಗಿ ಬಗ್ಗು ಬಡಿದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭಾರತ ತಂಡವು 43-12 ಅಂಕಗಳ ಬೃಹತ್ ಜಯದೊಂದಿಗೆ ಗೆಲುವಿನ ಕೇಕೆ ಹಾಕಿದೆ.
ಹಾಲಿ ಚಾಂಪಿಯನ್ ಭಾರತ ಮೊದಲಾರ್ಧದ ಆರಂಭದಲ್ಲೇ 8-6ರ ಮುನ್ನಡೆ ಕಾಯ್ದುಕೊಂಡಿತ್ತು. ಆ ಬಳಿ ಆಕ್ರಮಣಕಾರಿಯಾಟವಾಡಿದ ಭಾರತ ರೈಡಿಂಗ್ ಹಾಗೂ ಡಿಫೆನ್ಸ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರುವುದರೊಂದಿಗೆ 19-8 ಅಂಕಗಳೊಂದಿಗೆ ಮೊದಲಾರ್ಧ ಮುಕ್ತಾಯಗೊಳಿಸಿತು.
ಇನ್ನು ದ್ವಿತಿಯಾರ್ಧದ ಆರಂಭದಲ್ಲೇ ಮತ್ತೊಮ್ಮೆ ಜಪಾನ್ ತಂಡವನ್ನು ಆಲೌಟ್ ಮಾಡಿದ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಆಬಳಿಕ ಕೇವಲ ಎರಡು ಅಂಕ ಬಿಟ್ಟುಕೊಟಟ್ಟು ಮತ್ತೊಮ್ಮೆ ಜಪಾನ್ ತಂಡವನ್ನು ಆಲೌಟ್ ಮಾಡುವುದರೊಂದಿಗೆ ಬರೋಬ್ಬರಿ 28 ಅಂಕಗಳ ಭಾರೀ ಮುನ್ನಡೆ ಕಾಯ್ದುಕೊಂಡಿತು. ಅಂತಿಮವಾಗಿ ಭಾರತ 43-12 ಅಂಕಗಳ ಅಂತರದ ಬೃಹತ್ ಜಯ ಸಾಧಿಸಿತು.