Asian Games 2026: ಭಾರತಕ್ಕೆ ಒಂದೇ ದಿನ 4 ಪದಕ; ಶೂಟರ್‌ಗಳ ಅಬ್ಬರ, ಮೆಡಲ್‌ ಟ್ಯಾಲಿ 6ಕ್ಕೆ!

Kannadaprabha News   | Kannada Prabha
Published : Sep 22, 2026, 10:02 AM IST
India Shooting Medal

ಸಾರಾಂಶ

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್‌ಗಳು ಮತ್ತು ಎಂಎಂಎ ಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಶೂಟಿಂಗ್ ಮತ್ತು ಮಿಶ್ರ ಮಾರ್ಷಲ್ ಆರ್ಟ್ಸ್ ವಿಭಾಗಗಳಲ್ಲಿ ಭಾರತವು ಮತ್ತೆ 4 ಪದಕಗಳನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ನಗೋಯಾ(ಜಪಾನ್‌): 20ನೇ ಆವೃತ್ತಿ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮತ್ತೆ 4 ಪದಕ ತನ್ನದಾಗಿಸಿಕೊಂಡಿದೆ. ಮೊದಲ ದಿನ 2 ಪದಕ ಜಯಿಸಿದ್ದ ಶೂಟರ್‌ಗಳು ಸೋಮವಾರ ಮತ್ತೆ 3 ಪದಕಕ್ಕೆ ಗುರಿ ಇಟ್ಟರು. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ಗೆದ್ದ ಪದಕ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮತ್ತೊಂದು ಪದಕ ಮಿಶ್ರ ಮಾರ್ಷಲ್‌ ಆರ್ಟ್ಸ್‌(ಎಂಎಂಎ)ನಲ್ಲಿ ಸುಚಿಕಾ ಅವರಿಗೆ ಬಂತು. ಅವರು ಕಂಚಿಗೆ ತೃಪ್ತಿಪಟ್ಟುಕೊಂಡರು.

ಶೂಟಿಂಗ್‌ನಲ್ಲಿ ಮುಂದುವರೆದ ಪದಕ ಬೇಟೆ

ಶೂಟಿಂಗ್‌ನ ಪುರುಷರ 10 ಮೀ. ಏರ್ ರೈಫಲ್‌ ಸ್ಪರ್ಧೆಯಲ್ಲಿ ಹಿಮಾನ್ಶು ಧಿಲ್ಲೋನ್‌, ರುದ್ರಾಂಕ್ಷ್‌ ಪಾಟೀಲ್‌ ಹಾಗೂ ಪಾರ್ಥ್‌ ಮಾನೆ ಅವರಿದ್ದ ತಂಡ 1890.1 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದಿತು. ಚೀನಾ ತಂಡ 1899.0 ಅಂಕಗಳೊಂದಿಗೆ ಚಿನ್ನಕ್ಕೆ ಮುತ್ತಿಟ್ಟರೆ, ದಕ್ಷಿಣ ಕೊರಿಯಾ ತಂಡ 1884.2 ಸಂಪಾದಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡತು.

ಭಾರತದ ಈ ಮೂವರು ಶೂಟರ್‌ಗಳ ಪೈಕಿ ಇಬ್ಬರು ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಡಬಲ್‌ ಪೋಡಿಯಂ ಫಿನಿಶ್‌ ಸಾಧನೆ ಮಾಡಿದರು. 21ನೇ ಹುಟ್ಟುಹಬ್ಬದ ದಿನವೇ ಉತ್ತಮ ಪ್ರದರ್ಶನ ತೋರಿದ ಹಿಮಾನ್ಶು, 252.4 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡರು. ಉತ್ತಮ ಆರಂಭ ಪಡೆದು ಚಿನ್ನದ ಮೇಲೆ ಕಣ್ಣಿಟ್ಟಿದ್ದ ರುದ್ರಾಂಕ್ಷ್‌ ಕೊನೆಗೆ 230.9 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತರಾದರು. ಚೀನಾದ ಶೆಂಗ್‌ ಲಿಹಾವೊ 254.2 ಅಂಕಗಳೊಂದಿಗೆ ಏಷ್ಯನ್‌ ದಾಖಲೆ ನಿರ್ಮಿಸಿ ಚಿನ್ನ ಪಡೆದರು. ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ಪಾರ್ಥ್‌ ಮಾನೆ ಅಗ್ರ-8ರಲ್ಲಿ ಸ್ಥಾನ ಪಡೆಯಲು ವಿಫಲರಾಗಿ, ಫೈನಲ್‌ಗೇರುವ ಅವಕಾಶ ತಪ್ಪಿಸಿಕೊಂಡಿದ್ದರು.

ರುಚಿಕಾಗೆ ಕಂಚು:

ಮಿಶ್ರ ಮಾರ್ಷಲ್‌ ಆರ್ಟ್ಸ್‌ನ ಮಹಿಳೆಯರ ಸಾಂಪ್ರದಾಯಿಕ 60 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸುಚಿತಾ ತಾರಿಯಲ್‌ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಅವರು ಸೆಮಿಫೈನಲ್‌ನಲ್ಲಿ ಸಿಂಗಾಪುರದ ಹ್ಯು ಹೂನ್‌ ಟಿಯೊ ವಿರುದ್ಧ ಸೋಲನುಭವಿಸಿದರು.

ಸದ್ಯ ಭಾರತ ಗೇಮ್ಸ್‌ನಲ್ಲಿ 4 ಬೆಳ್ಳಿ, 2 ಕಂಚು ಸೇರಿದಂತೆ ಒಟ್ಟು 6 ಪದಕ ಗೆದ್ದಿದೆ. ಆದರೆ ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ಕುಸಿದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಸ್ಮೃತಿ ಮಂಧನಾ ಪಿರಿಯಡ್ಸ್ ದಿನಾಂಕದ ಮೇಲೆ ಬೆಟ್ಟಿಂಗ್ ದಂಧೆ!': ಯುವಕನ ವಿಲಕ್ಷಣ ಐಡಿಯಾಗೆ ನೆಟ್ಟಿಗರ ರೋಶ!
ದೇಶದ ಅಗ್ರಕಂಪನಿಗಳಿಗೆ ಬಿಸಿಸಿಐ ಅಪಶಕುನ...! ಕ್ರಿಕೆಟ್‌ಗೆ ಸ್ಪಾನ್ಸರ್ ಆದವರೆಲ್ಲಾ ಮಟಾಷ್