ಏಷ್ಯನ್ ಗೇಮ್ಸ್ 2018: ಕಂಚು ಗೆದ್ದು ಇತಿಹಾಸ ಬರೆದ ಸೈನಾ

By Web DeskFirst Published Aug 27, 2018, 11:36 AM IST
Highlights

ಏಷ್ಯನ್ ಗೇಮ್ಸ್’ನ ಬ್ಯಾಡ್ಮಿಂಟನ್’ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಕೀರ್ತಿಗೆ ಸೈನಾ ಪಾತ್ರರಾಗಿದ್ದಾರೆ. 

ಜಕಾರ್ತ[ಆ.27]: ಭಾರತದ ಅನುಭವಿ ಶಟ್ಲರ್ ಸೈನಾ ನೆಹ್ವಾಲ್ ಏಷ್ಯನ್ ಗೇಮ್ಸ್’ನ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ಸ್’ನಲ್ಲಿ ಮುಗ್ಗರಿಸುವ ಮೂಲಕ ಕಂಚಿಕ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇದು ಸೈನಾ ಪಾಲಿಗೆ ಮೊದಲ ಏಷ್ಯನ್ ಗೇಮ್ಸ್’ನಲ್ಲಿ ಮೊದಲ ಪದಕವಾಗಿದೆ. 

ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಶ್ರೇಯಾಂಕಿತೆ ತೈವಾನಿನ ತೈ ತ್ಸು ಯಿಂಗ್ ವಿರುದ್ಧ 21-17, 21-14 ನೇರ ಗೇಮ್’ಗಳಿಂದ ಮುಗ್ಗರಿಸಿ ಕಂಚಿನ ಪದಕ ಜಯಿಸಿದರು.  
ಆರಂಭದಲ್ಲಿ ಉಭಯ ಆಟಗಾರ್ತಿಯರಿಂದ ರೋಚಕ ಕಾದಾಟ ಮೂಡಿ ಬಂತು. ಆರಂಭದಲ್ಲಿ 11-10 ಅಂಕದಲ್ಲಿ ಹಿನ್ನಡೆಯಲ್ಲಿದ್ದ ಸೈನಾ ಆಬಳಿಕ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.

ಮೊದಲ ಗೇಮ್ ಅನ್ನು 21-17ರಿಂದ ತೈ ತ್ಸು ಯಿಂಗ್ ತಮ್ಮದಾಗಿಸಿಕೊಂಡರು. ಆ ಬಳಿಕ ಎರಡನೇ ಸೆಟ್’ನಲ್ಲೂ ಆಕ್ರಮಣಕಾರಿಯಾಟವಾಡಿದ ತೈವಾನ್ ಆಟಗಾರ್ತಿ 21-14 ಗೇಮ್’ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದರು. ಏಷ್ಯನ್ ಗೇಮ್ಸ್’ನ ಬ್ಯಾಡ್ಮಿಂಟನ್’ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಮೊದಲ ಆಟಗಾರ್ತಿ ಎನ್ನುವ ಕೀರ್ತಿಗೆ ಸೈನಾ ಪಾತ್ರರಾಗಿದ್ದಾರೆ. 
 

click me!