ಜೆ. ಜಾನ್ಸನ್ 1500 ಮೀಟರ್ ಫೈನಲ್’ನಲ್ಲಿ 3:44.72 ಸೆಕೆಂಡ್’ಗಳಲ್ಲಿ ಗುರಿಮುಟ್ಟುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಬರೆದರು. ಇದರ ಜತೆಗೆ ಚಿನ್ನದ ಪದಕ ಜಯಿಸಿದರು.
ಜಕಾರ್ತ[ಆ.30]: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನ ಅಥ್ಲೇಟಿಕ್ಸ್ ವಿಭಾಗದಲ್ಲಿ ಭಾರತೀಯ ಅಥ್ಲೀಟ್’ಗಳ ಪದಕದ ಬೇಟೆ ಮುಂದುವರೆದಿದ್ದು, 1500 ಮೀಟರ್ ಓಟದಲ್ಲಿ ಜಿನ್’ಸನ್ ಜಾನ್ಸನ್ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಪದಕದೊಂದಿಗೆ ಭಾರತ ಅಥ್ಲೀಟಿಕ್ಸ್ ವಿಭಾಗದಲ್ಲಿ 6 ಚಿನ್ನದ ಪದಕ ಜಯಿಸಿದಂತಾಗಿದೆ.
ಜೆ. ಜಾನ್ಸನ್ 1500 ಮೀಟರ್ ಫೈನಲ್’ನಲ್ಲಿ 3:44.72 ಸೆಕೆಂಡ್’ಗಳಲ್ಲಿ ಗುರಿಮುಟ್ಟುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಬರೆದರು. ಇದರ ಜತೆಗೆ ಚಿನ್ನದ ಪದಕ ಜಯಿಸಿದರು. ಇವರ ಜತೆ ಸ್ಪರ್ಧಿಸಿದ್ದ ದೇಶದ ಮತ್ತೋರ್ವ ಸ್ಪರ್ಧಿ, 800 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಮಂಜೀತ್ ಸಿಂಗ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಹೀಗಿತ್ತು ಜಾನ್ಸನ್ ಚಿನ್ನ ಗೆದ್ದ ಅಪೂರ್ವ ಕ್ಷಣ:
ಕೇರಳ ಮೂಲದ ಜಾನ್ಸನ್ 800 ಮೀಟರ್ ಓಟದಲ್ಲಿ ಕೂದಲೆಳೆ ಅಂತರದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಭಾರತದ ಮತ್ತೋರ್ವ ಓಟಗಾರ ಮಂಜೀತ್ ಸಿಂಗ್ ಚಿನ್ನದ ಪದಕ ಜಯಿಸಿದ್ದರು. ಇದು ಏಷ್ಯನ್ ಗೇಮ್ಸ್’ನಲ್ಲಿ ಭಾರತದ 12ನೇ ಚಿನ್ನದ ಪದಕವಾಗಿದೆ.