ಏಷ್ಯನ್ ಗೇಮ್ಸ್ 2018: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಬಂತು ಚಿನ್ನ-ಬೆಳ್ಳಿ

By Web DeskFirst Published Aug 28, 2018, 7:04 PM IST
Highlights

ಏಷ್ಯನ್ ಗೇಮ್ಸ್ ಕ್ರೀಡಾಕೂಟದ 10 ನೇ ದಿನ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಹೇಗಿತ್ತು? ಪಡೆದ ಪದಕಗಳು ಏಷ್ಟು? ಇಲ್ಲಿದೆ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಪದಕ ವಿವರ

ಜಕರ್ತಾ(ಆ.28): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡುತ್ತಿದೆ. ಕ್ರೀಡಾಪಟುಗಳು ಪ್ರತಿ ದಿನ ಪದಕ ಗೆಲ್ಲೋ ಮೂಲಕ ವಿಶ್ವಮಟ್ಟದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡಿದ್ದಾರೆ. 

ಪುರುಷರ 800 ಮೀಟರ್ ಓಟದಲ್ಲಿ ಭಾರತದ ಮನ್ಜೀತ್ ಸಿಂಗ್ ಸ್ವರ್ಣ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 1:46:15 ಅಂತರದಲ್ಲಿ ಗುರಿ ತಲುಪೋ ಮೂಲಕ ಮನೀತ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಜಿನ್ಸನ್ ಜಾನ್ಸನ್ ಎರಡನೇ ಸ್ಥಾನಿಯಾಗಿ ಗುರಿ ತಲುಪೋ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇನ್ನು 52 ಕೆಜಿ ಮಹಿಳೆಯರ ಕುರಶ್ ಕುಸ್ತಿಯಲ್ಲಿ ಭಾರತದ ಪಿಂಕಿ ಬಲ್ಹಾರ ಬೆಳ್ಳಿ ಪದಕ ಗೆದ್ದಿದ್ದಾರೆ. 

ಭಾರತ ಪದಕ ಪಟ್ಟಿಯಲ್ಲಿ 9 ಚಿನ್ನ, 18 ಬೆಳ್ಳಿ ಹಾಗೂ 22 ಕಂಚಿನೊಂದಿಗೆ ಒಟ್ಟು 49 ಪದಕ ಗೆದ್ದು 8ನೇ ಸ್ಥಾನದಲ್ಲಿದೆ. ಇನ್ನು ಮೊದಲ ಸ್ಥಾನದಲ್ಲಿರುವ ಚೀನಾ 93 ಚಿನ್ನ, 63 ಬೆಳ್ಳಿ ಹಾಗೂ 45 ಕಂಚಿನೊಂದಿಗೆ ಒಟ್ಟು 201 ಪದಕ ಪಡೆದುಕೊಂಡಿದೆ. 

ಮನೀತ್ ಸಿಂಗ್ ಚಿನ್ನ ಗೆದ್ದ ಸಂಭ್ರಮ ಹೀಗಿತ್ತು ನೋಡಿ:

click me!