ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಬಂತು 38ನೇ ಪದಕ

Published : Aug 27, 2018, 06:05 PM ISTUpdated : Sep 09, 2018, 08:45 PM IST
ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಬಂತು 38ನೇ ಪದಕ

ಸಾರಾಂಶ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 9ನೇ ದಿನ ಭಾರತ ಪದಕಗಳಿಕೆ ವೇಗ ಇಳಿಮುಖವಾದರೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. 9ನೇ ದಿನದಾಟದಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಹೇಗಿತ್ತು? ಪಡೆದ ಪದಕಗಳು ಯಾವುದು? ಇಲ್ಲಿದೆ.

ಜಕರ್ತಾ(ಆ.27): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 38ಕ್ಕೇರಿದೆ. 400 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ಧರುನ್ ಅಯ್ಯಸ್ವಾಮಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ 11 ಬೆಳ್ಳಿ ಪದಕ ಸಂಪಾದಿಸಿದೆ.

 

 

ಅಂತಿಮ ಸುತ್ತಿನ ಹೋರಾಟದಲ್ಲಿ ಧರುನ್ ಅಯ್ಯಸ್ವಾಮಿ ಮಿಂಚಿನ ಓಟದ ಮೂಲಕ ಬೆಳ್ಳಿ ಗೆದ್ದರು. 48.96 ಸೆಕುಂಡ್‌ಗಳಲ್ಲಿ ದ್ವಿತೀಯ ಸ್ಥಾನಿಯಾಗಿ  ಅಯ್ಯಸ್ವಾಮಿ ಗುರಿ ತಲುಪಿದರು. 49 ಸೆಕುಂಡ್‌ಗಳಲ್ಲಿ 400 ಮೀಟರ್ ಹರ್ಡಲ್ಸ್ ಪೂರೈಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೂ ಧರನ್ ಪಾತ್ರರಾಗಿದ್ದಾರೆ. 

ಭಾರತ ಪದಕ ಪಟ್ಟಿಯಲ್ಲಿ 7 ಚಿನ್ನ, 11 ಬೆಳ್ಳಿ ಹಾಗೂ 20 ಕಂಚಿನೊಂದಿಗೆ ಒಟ್ಟು 38 ಪದಕದೊಂದಿಗೆ 9ನೇ ಸ್ಥಾನದಲ್ಲಿದೆ. ಇನ್ನು ಮೊದಲ ಸ್ಥಾನದಲ್ಲಿರುವ ಚೀನಾ 84 ಚಿನ್ನ, 60 ಬೆಳ್ಳಿ ಹಾಗೂ 40 ಕಂಚಿನೊಂದಿಗೆ ಒಟ್ಟು 184 ಪದಕ ಪಡೆದುಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ICC Men’s T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಅಚ್ಚರಿಯ ಆಯ್ಕೆ, ಗಿಲ್‌ಗಿಲ್ಲ ಸ್ಥಾನ
ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ