ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ದ್ಯುತಿ ಚಾಂದ್‌ಗೆ 2ನೇ ಪದಕ

By Web DeskFirst Published Aug 29, 2018, 6:32 PM IST
Highlights

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕ ಹೋರಾಟ ಮುಂದುವರಿಸಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮತ್ತೆ ಪದಕ ಸಂಪಾದಿಸಿದೆ. 11ನೇ ಭಾರತದ ಪ್ರದರ್ಶನ ಹೇಗಿದೆ? ಗೆದ್ದ ಪದಕಗಳ ಸಂಖ್ಯೆ ಎಷ್ಟು?ಇಲ್ಲಿದೆ.

ಜಕರ್ತಾ(ಆ.29): ಏಷ್ಯನ್ ಗೇಮ್ಸ್ ಕ್ರೀಡಾಕೂಟದ 11ನೇ ದಿನ ಭಾರತದ ಕ್ರೀಡಾಪಟುಗಳು ಪದಕ ಬಾಚಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. 100 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದಿದ್ದ ದ್ಯುತಿ ಚಾಂದ್ ಇದೀಗ 200 ಮೀಟರ್ ಓಟದಲ್ಲೂ ಬೆಳ್ಳಿ ಪದಕ ಗೆದ್ದಿದ್ದಾರೆ.

100 ಮೀಟರ್ ಓಟವನ್ನ 11.43 ಸೆಕುಂಡ್‌ಗಳಲ್ಲಿ ಪೂರೈಸಿ ಬೆಳ್ಳಿ ಪದಕ ಗೆದ್ದ ದ್ಯುತಿ ಚಾಂದ್, ಇದೀಗ 200 ಮೀಟರ್ ಓಟವನ್ನ 23.20 ಸೆಕುಂಡ್‌ಗಳಲ್ಲಿ ಪೂರೈಸಿದ್ದಾರೆ. ಈ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ.ಮೊದಲ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 2 ಬೆಳ್ಳಿ ಪದಕ ಗೆಲ್ಲೋ ಮೂಲಕ ದ್ಯುತಿ ಚಾಂದ್ ದಾಖಲೆ ಬರೆದಿದ್ದಾರೆ. 

 

wins her second medal at The sprinter bags W-200m SILVER MEDAL with the timing of 23.20 🥈 Keep going pic.twitter.com/Qjz6tYQzpf

— Athletics Federation of India (@afiindia)

 

ಇದೀಗ ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿದೆ. 9 ಚಿನ್ನ, 20 ಬೆಳ್ಳಿ ಹಾಗೂ 23 ಕಂಚಿನೊಂದಿಗೆ ಭಾರತ ಒಟ್ಟು 52 ಪದಕ ಗೆದ್ದುಕೊಂಡಿದೆ.  ಮೊದಲ ಸ್ಥಾನದಲ್ಲಿರುವ ಚೀನಾ 101 ಚಿನ್ನ, 65 ಬೆಳ್ಳಿ ಹಾಗೂ 49 ಕಂಚಿನೊಂದಿಗೆ ಒಟ್ಟು 215 ಪದಕ ಗೆದ್ದುಕೊಂಡಿದೆ.

click me!