ಏಷ್ಯಾಕಪ್ ಫೈನಲ್: ಟೀಂ ಇಂಡಿಯಾದ 5ನೇ ವಿಕೆಟ್ ಪತನ

By Web DeskFirst Published Sep 28, 2018, 11:49 PM IST
Highlights

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದೆ. ಗೆಲುವಿಗಾಗಿ ಉಭಯ ತಂಡಗಳು ಕಠಿಣ ಹೋರಾಟ ನೀಡುತ್ತಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ದುಬೈ(ಸೆ.28): ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಗೆಲುವಿಗೆ 223 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ ಕಠಿಣ ಹೋರಾಟ ನೀಡುತ್ತಿದೆ. ಆದರೆ ಸದ್ಯ ಟೀಂ ಇಂಡಿಯಾ 5ನೇ ವಿಕೆಟ್ ಕಳೆದುಕೊಂಡಿದೆ.

ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 15 ರನ್ ಸಿಡಿಸಿ ಔಟಾದರು. ಇನ್ನು ಅಂಬಾಟಿ ರಾಯುಡು ಕೇವಲ 2 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ನಾಯಕ ರೋಹಿತ್ ಶರ್ಮಾ ಅಲ್ಪ ಹೋರಾಟ ನೀಡಿದರು.

ರೋಹಿತ್ ಶರ್ಮಾ 48 ರನ್ ಸಿಡಿಸಿ ನಿರ್ಗಮಿಸಿದರು. 83 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡಕ್ಕೆ ಎಂ.ಎಸ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಆಸರೆಯಾದರು. ಆದರೆ ಕಾರ್ತಿಕ್ ಆಟ 37 ರನ್‌ಗಳಿಗೆ ಅಂತ್ಯವಾಯಿತು. ಧೋನಿ 36 ರನ್ ಸಿಡಿಸಿ ಔಟಾದರು ಸದ್ಯ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿಗ ಬಾಂಗ್ಲಾದೇಶ 48.3 ಓವರ್‌ಗಳಲ್ಲಿ 222ರನ್‌ಗಳಿಗೆ ಆಲೌಟ್ ಆಗಿತ್ತು. ಲಿಟ್ಟನ್ ದಾಸ್ 121 ರನ್ ಸಿಡಿಸಿದ್ದರು. 

click me!