ಭಾರತದ ಗೆಲುವಿಗೆ 238 ರನ್ ಟಾರ್ಗೆಟ್ ನೀಡಿದ ಪಾಕಿಸ್ತಾನ

By Web DeskFirst Published Sep 23, 2018, 8:31 PM IST
Highlights

ಭಾರತ  ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಹೋರಾಟ ಆರಂಭದಲ್ಲೇ ಕುತೂಹಲ ಕೆರಳಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದಿರುವ ಪಾಕಿಸ್ತಾನ ತಂಡ ಬ್ಯಾಟಿಂಗ್ ಹಾಗೂ ಭಾರತದ ಬೌಲಿಂಗ್ ಪ್ರದರ್ಶನದ ಅಪ್‌ಡೇಟ್ಸ್ ಇಲ್ಲಿದೆ.

ದುಬೈ(ಸೆ.23):  ಟೀಂ ಇಂಡಿಯಾ ವಿರುದ್ಧದ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ನಿಗಧಿತ 50 ಓವರ್‌ಗಳಲ್ಲಿ7 ವಿಕೆಟ್ ನಷ್ಟಕ್ಕೆ 237 ರನ್ ಸಿಡಿಸಿದೆ. ಈ ಮೂಲಕ ಭಾರತದ ಗೆಲುವಿಗೆ ರನ್ ಟಾರ್ಗೆಟ್ ನೀಡಿದೆ.

 

Pakistan finish their innings on 237/7 with top-scoring with 78.

Will India chase it down?

FOLLOW LIVE👇👇https://t.co/0SqS4ClLWD pic.twitter.com/5MwnoG363o

— ICC (@ICC)

 

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಆರಂಭದಲ್ಲೇ  ಇಮಾಮ್ ಉಲ್ ಹಕ್ ವಿಕೆಟ್ ಕಳೆದುಕೊಂಡಿತು. ಇಮಾಮ್ 10 ರನ್ ಸಿಡಿಸಿ ಔಟಾದರು.  ಆದರೆ 1 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 31 ರನ್ ಸಿಡಿಸಿದ್ದ ಫಕರ್ ಜಮಾನ್, ಕುಲ್ದೀಪ್ ಮೋಡಿಗೆ ಬಲಿಯಾದರು.  ಇನ್ನು 9ರನ್  ಸಿಡಿಸಿದ ಬಾಬರ್ ಅಜಮ್ ರನೌಟ್‌ಗೆ ಬಲಿಯಾದರು. 

3 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡಕ್ಕೆ ನಾಯಕ ಸರ್ಫಾರಾಜ್ ಅಹಮ್ಮದ್ ಹಾಗೂ ಶೋಯಿಬ್ ಮಲ್ಲಿಕ್  ಆಸರೆಯಾದರು. ಸರ್ಫಾರಜ್ 44 ರನ್ ಸಿಡಿಸಿ ಔಟಾದರೆ, ಮಲ್ಲಿಕ್ 78 ರನ್ ಕಾಣಿಕೆ ನೀಡಿದರು.

ಅಬ್ಬರಿಸಿದ ಆಸಿಫ್ ಆಲಿ 30 ರನ್ ಸಿಡಿಸಿದರು. ಶದಬ್ ಖಾನ್ 10 ರನ್ ಸಿಡಿಸಿ ಔಟಾದರು. ಮೊಹಮ್ಮದ್ ನವಾಜ್ ಅಜೇಯ 15 ರನ್ ಸಿಡಿಸಿದರು. ಈ ಮೂಲಕ ಪಾಕಿಸ್ತಾನ 7 ವಿಕೆಟ್ ನಷ್ಟಕ್ಕೆ 237 ರನ್ ಪೇರಿಸಿತು. ಭಾರತದ ಪರ ಜಸ್‌ಪ್ರೀತ್ ಬುಮ್ರಾ, ಯುಜುವೇಂದ್ರ ಚೆಹಾಲ್, ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು. ಇದೀಗ ಭಾರತ ಗೆಲುವಿಗೆ 238 ರನ್ ಗುರಿ ಬೆನ್ನಟ್ಟಬೇಕಿದೆ.

click me!