ಏಷ್ಯಾಕಪ್ 2018: ಅಫ್ಘಾನಿಸ್ತಾನ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ

Published : Sep 23, 2018, 06:59 PM IST
ಏಷ್ಯಾಕಪ್ 2018: ಅಫ್ಘಾನಿಸ್ತಾನ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ

ಸಾರಾಂಶ

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಒಂದೆಡೆ ಭಾರತ ಹಾಗೂ ಪಾಕಿಸ್ತಾನ  ಹೋರಾಟ ನಡೆಸುತ್ತಿದ್ದರೆ, ಇತ್ತ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಮುುಖಾಮುಖಿಯಾಗಿದೆ. ಇಲ್ಲಿದೆ ಬಾಂಗ್ಲಾ ಹಾಗೂ ಆಫ್ಘಾನ್ ಹೋರಾಟದ ಅಪ್‌ಡೇಟ್ಸ್

ಅಬು ದಾಬಿ(ಸೆ.23): ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ದಾಳಿಗೆ ಬಾಂಗ್ಲಾದೇಶ ತತ್ತರಿಸಿದೆ. ಈ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ.

 

 

ನಜ್ಮುಲ್ ಹುಸೈನ್ 6 ರನ್ ಸಿಡಿಸಿ ಅಫ್ತಾಬ್ ಅಲಮ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮೊಹಮ್ಮದ್ ಮಿಥುನ್ ಕೇವಲ 1 ರನ್ ಸಿಡಿಸಿ ಔಟಾದರು.  ಲಿಟ್ಟನ್ ದಾಸ್ 41 ರನ್‌ಗಳ ಕಾಣಿಕೆ ನೀಡಿದರು.

ಶಕೀಬ್ ಅಲ್ ಹಸನ್ ಶೂನ್ಯ ಸುತ್ತಿದರೆ, ಮುಶ್ಫಿಕರ್ ರಹೀಮ್ 33 ರನ್ ಸಿಡಿಸಿ ಔಟಾದರು. ಇಮ್ರುಲ್ ಕೈಸ್ ಹಾಗೂ ಮೊಹಮ್ಮದುಲ್ಲಾ ತಂಡಕ್ಕೆ ಆಸರೆಯಾಗಿದ್ದಾರೆ.  ಸದ್ಯ ಬಾಂಗ್ಲಾದೇಶ 102 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8 ವರ್ಷ ಕೋಮಾದಲ್ಲಿ ಕಳೆದು ಇಹಲೋಕ ತ್ಯಜಿಸಿದ ಕ್ರಿಕೆಟರ್
2026ರ ಟಿ20 ವಿಶ್ವಕಪ್ ಟೂರ್ನಿಗೆ ಆಫ್ಘಾನಿಸ್ತಾನ ತಂಡ ಪ್ರಕಟ; ಕಮ್‌ಬ್ಯಾಕ್ ಮಾಡಿದ ಮಾರಕ ವೇಗಿ!