ಏಷ್ಯಾಕಪ್ 2018: ಪಾಕ್ ದಾಳಿಗೆ ಕುಸಿದ ಹಾಂಗ್ ಕಾಂಗ್ !

By Web DeskFirst Published Sep 16, 2018, 7:23 PM IST
Highlights

ಏಷ್ಯಾಕಪ್ ಟೂರ್ನಿಯ ದ್ವಿತೀಯ ದಿನ ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ನಡುವಿನ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ದಿಟ್ಟ ಹೋರಾಟ ನೀಡುತ್ತಿದ್ದ ಹಾಂಕ್ ಕಾಂಗ್ ಬಲಿಷ್ಠ ಪಾಕ್ ವಿರುದ್ಧ ದಾಳಿಗೆ ಕುಸಿತ ಕಂಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

ದುಬೈ(ಸೆ.16): ಏಷ್ಯಾಕಪ್ ಟೂರ್ನಿಯ ದ್ವಿತೀಯ ದಿನ ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ತಂಡ ಹೋರಾಟ ನಡೆಸುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಹಾಂಕ್ ಕಾಂಗ್ ,ಎದುರಾಳಿ ಪಾಕಿಸ್ತಾ ದಾಳಿಗೆ ಕುಸಿತ ಕಂಡಿದೆ.

 

Breakthrough! Aizaz Khan and Kinchit Shah put on a fifty partnership before Usman Khan beats Aizaz with a beauty to claim the sixth wicket! Hong Kong 97/6 after 30.2 overs. LIVE ➡️ https://t.co/m411ePp9Q8 pic.twitter.com/6Hqp3cRe9S

— ICC (@ICC)

 

ನಿಝಾಕತ್ ಖಾನ್ 13, ಅಂಶುಮಾನ್ ರಾತ್ 19 ರನ್ ಸಿಡಿಸಿ ಔಟಾದರು. ಬಾಬರ್ ಹಯಾತ್ ಹಾಗೂ ಕ್ರಿಸ್ಟೋಪರ್ ಕಾರ್ಟರ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಕಿಂಚಿತ್ ಶಾ  ತಂಡಕ್ಕೆ ಆಸರೆಯಾಗಿದ್ದಾರೆ. ಹಾಂಕ್ ಕಾಂಗ್ 97 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಪಾಕಿಸ್ತಾನ ಆರಂಭದಲ್ಲೇ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.  ಪಾಕಿಸ್ತಾನದ ಶದಬ್ ಖಾನ್ 2, ಹಸನ್ ಆಲಿ , ಫಹೀಮ್ ಅಶ್ರಫ್ ಹಾಗೂ ಉಸ್ಮಾನ್ ಖಾನ್ ತಲಾ 1 ವಿಕೆಟ್ ಕಬಳಿಸಿದ್ದಾರೆ. 

click me!