
ದುಬೈ(ಸೆ.15): ಏಷ್ಯಾಕಪ್ ಟೂರ್ನಿ ಉದ್ಘಾಟನೆಗೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಹೋರಾಟ ನಡೆಸುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶಕ್ಕೆ , ಲಂಕಾ ಹಿರಿಯ ವೇಗಿ ಲಸಿತ್ ಮಲಿಂಗ ಶಾಕ್ ನೀಡಿದ್ದಾರೆ.
ಆರಂಭಿಕ ಲಿಟ್ಟನ್ ದಾಸ್ ಹಾಗೂ ಆಲ್ರೌಂಡರ್ ಶಕೀಬ್ ಅಲ್ ಹಸನ್ ಶೂನ್ಯಕ್ಕೆ ಔಟಾದರು. 2 ವಿಕೆಟ್ ಕಬಳಿಸಿದ ಮಲಿಂಗ ಲಂಕಾ ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ. ಬರೋಬ್ಬರಿ ಒಂದು ವರ್ಷಗಳ ಬಳಿಕ ಏಕದಿನ ತಂಡಕ್ಕೆ ಮರಳಿದ ಮಲಿಂಗ, ಕಮ್‌ಬ್ಯಾಕ್ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಈ ಮೂಲಕ 2019ರ ವಿಶ್ವಕಪ್ ಟೂರ್ನಿಗೂ ಫಿಟ್ ಅನ್ನೋ ಸೂಚನೆ ನೀಡಿದ್ದಾರೆ.
ಇಂದಿನಿಂದ ಸೆಪ್ಟೆಂಬರ್ 28ರ ವರೆಗೆ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನ ಸೆಪ್ಟೆಂಬರ್ 18 ರಂದು ಹಾಂಕ್ ಕಾಂಗ್ ವಿರುದ್ಧ ಆಡಲಿದೆ. ಬಳಿಕ ಸೆ.19 ರಂದು ಪಾಕಿಸ್ತಾನ ವಿರುದ್ದ ಹೋರಾಟ ನಡೆಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.