ಆರ್ಚರಿ ವಿಶ್ವಕಪ್: ಮೊದಲ ಸುತ್ತಲ್ಲಿ ಹೊರಬಿದ್ದ ದೀಪಿಕಾ

Published : Sep 03, 2017, 07:00 PM ISTUpdated : Apr 11, 2018, 12:43 PM IST
ಆರ್ಚರಿ ವಿಶ್ವಕಪ್: ಮೊದಲ ಸುತ್ತಲ್ಲಿ ಹೊರಬಿದ್ದ ದೀಪಿಕಾ

ಸಾರಾಂಶ

ಕಳೆದ ವರ್ಷದ ಒಲಿಂಪಿಕ್ಸ್ ಪ್ರೀ ಕ್ವಾರ್ಟರ್‌'ಫೈನಲ್‌'ನಲ್ಲಿ ದೀಪಿಕಾ ಅವರನ್ನು ತೈವಾನ್‌'ನ ಆರ್ಚರಿ ಪಟು ತಾನ್ ಯ ಟಿಂಗ್ ಸೋಲುಣಿಸಿದ್ದರು.

ರೋಮ್(ಸೆ.03): ನಾಲ್ಕು ಬಾರಿ ಬೆಳ್ಳಿ ಪದಕ ವಿಜೇತೆ ಭಾರತದ ದೀಪಿಕಾ ಕುಮಾರಿ, ಆರ್ಚರಿ ವಿಶ್ವಕಪ್ ಫೈನಲ್‌'ನ ಮೊದಲ ಸುತ್ತಿನಲ್ಲಿ ತೈವಾನ್‌'ನ ತಾನ್ ಯ ಟಿಂಗ್ ಎದುರು ನೇರ ಸೆಟ್‌'ಗಳಲ್ಲಿ ಸೋಲು ಕಂಡು ಚಾಂಪಿಯನ್‌'ಶಿಪ್‌'ನಿಂದ ಹೊರಬಿದ್ದಿದ್ದಾರೆ.

ಇಂದು ನಡೆದ ಮಹಿಳೆಯರ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮಾಜಿ ವಿಶ್ವ ನಂ.1 ಆರ್ಚರಿ ಪಟು ದೀಪಿಕಾ 0-6 ರಿಂದ ತೈವಾನ್ ಆಟಗಾರ್ತಿ ಎದುರು ಪರಾಭವ ಹೊಂದಿದರು.

ಪ್ರಸಕ್ತ ವರ್ಷದಲ್ಲಿ ನಡೆದಿದ್ದ 4 ಆರ್ಚರಿ ವಿಶ್ವಕಪ್‌'ನಲ್ಲಿ ದೀಪಿಕಾ ಎರಡು ಬಾರಿ ಕ್ವಾರ್ಟರ್‌'ಫೈನಲ್ ಹಂತಕ್ಕೇರಿದ್ದರು.

ಕಳೆದ ವರ್ಷದ ಒಲಿಂಪಿಕ್ಸ್ ಪ್ರೀ ಕ್ವಾರ್ಟರ್‌'ಫೈನಲ್‌'ನಲ್ಲಿ ದೀಪಿಕಾ ಅವರನ್ನು ತೈವಾನ್‌'ನ ಆರ್ಚರಿ ಪಟು ತಾನ್ ಯ ಟಿಂಗ್ ಸೋಲುಣಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

WPLನ ಹೊಸ ತಾರೆ: ಯಾರು ಈ 16ರ ಹರೆಯದ ಚೋಟಿ ಶಫಾಲಿ
ಧನಶ್ರೀ ವರ್ಮಾ ಜತೆಗಿನ ವಿಚ್ಛೇದನದ ಬಳಿಕ ಯಜುವೇಂದ್ರ ಚಾಹಲ್‌ಗೆ ಇನ್ನೊಂದು ಆಘಾತ!