ಇಂಗ್ಲೆಂಡ್‌ನಲ್ಲಿ ನಾಯಕ ಕೊಹ್ಲಿಗೆ ಅನುಷ್ಕಾ ಸಾಥ್

Published : Jul 05, 2018, 01:05 PM ISTUpdated : Jul 12, 2018, 07:13 PM IST
ಇಂಗ್ಲೆಂಡ್‌ನಲ್ಲಿ ನಾಯಕ ಕೊಹ್ಲಿಗೆ ಅನುಷ್ಕಾ ಸಾಥ್

ಸಾರಾಂಶ

ಕ್ರಿಕೆಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ದಿಢೀರ್ ಆಗಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾಳನ್ನ ಇಂಗ್ಲೆಂಡ್‌ಗೆ ಕರೆಸಿಕೊಂಡಿದ್ದಾರೆ. ಅಷ್ಟಕ್ಕೂ ಕೊಹ್ಲಿ ನಿರ್ಧಾರಕ್ಕೆ ಕಾರಣೇನು ಇಲ್ಲಿದೆ. 

ಕಾರ್ಡಿಫ್(ಜು.05): ಟೀಂ ಇಂಡಿಯಾ ಕ್ರಿತಕೆಟಿಗರು ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯೂಸಿಯಾಗಿದ್ದಾರೆ. ಈಗಾಗಲೇ ಮೊದಲ ಟಿ20 ಪಂದ್ಯ ಗೆದ್ದು ಶುಭಾರಂಭ ಮಾಡಿರುವ ಭಾರತ ಇನ್ನೆರಡು ಟಿ20, 3 ಏಕದಿನ ಪಂದ್ಯ ಹಾಗೂ 5 ಟೆಸ್ಟ್ ಪಂದ್ಯಗಳನ್ನಾಡಲಿದೆ. 

ಸುದೀರ್ಘ 2 ತಿಂಗಳುಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಕುಟುಂಬ ಸದಸ್ಯರನ್ನ ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಲವು ಕ್ರಿಕೆಟಿಗರ ಪತ್ನಿಯರು ಈಗಾಗಲೇ ಟೀಂಇಂಡಿಯಾ ಜೊತೆಗಿದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡಲು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ತೆರೆಳಿದ್ದಾರೆ.

 

;ಸುಯಿ ಧಾಗಾ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ಅನುಷ್ಕಾ ಶರ್ಮಾ ಇದೀಗ ಬಿಡುವು ಮಾಡಿಕೊಂಡಿದ್ದಾರೆ. ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದೆ. ಹೀಗಾಗಿ ಕೊಹ್ಲಿ, ಪತ್ನಿ ಅನುಷ್ಕಾಳನ್ನ ಇಂಗ್ಲೆಂಡ್‌ಗೆ ಕರೆಸಿಕೊಂಡಿದ್ದಾರೆ.  2ನೇ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಇದೀಗ ಕಾರ್ಡಿಫ್‌ಗೆ ಬಂದಿಳಿದಿದೆ. ಟೀಂ ಇಂಡಿಯಾ ಬಸ್ ಪ್ರಯಾಣದಲ್ಲಿ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ.  

 

 

ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯ ಗೆದ್ದ ಟೀ ಇಂಡಿಯಾ, ನಾಳೆ(ಜು.06) ಕಾರ್ಢಿಫ್‌ನಲ್ಲಿ  ದ್ವಿತೀಯ ಟಿ20 ಪಂದ್ಯ ಆಡಲಿದೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಕಾರ್ಡಿಫ್ ಹೊಟೆಲ್‌ನಲ್ಲಿ ಅಭಿಮಾನಿಗಳು ಮುಗಿಬಿದ್ದರು.

 

 

2014ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವಿರಾಟ್ ಕೊಹ್ಲಿಗೆ ಅನುಷ್ಕಾ ಶರ್ಮಾ ಸಾಥ್ ನೀಡಿದ್ದರು. ಆದರೆ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ವಿರುದ್ಧ ಆಕ್ರೋಷ ವ್ಯಕ್ತವಾಗಿತ್ತು.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!