ಬಾಲಿವುಡ್ ಹಾಡಿಗೆ ಅಮೆರಿಕಾ ಟೆನಿಸ್ ಆಟಗಾರ್ತಿ ಡ್ಯಾನ್ಸ್ ಮಾಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಬಾಲಿವುಡ್ ಶೈಲಿಯಲ್ಲೇ ಡ್ಯಾನ್ಸ್ ಮಾಡಿರುವ ಅಮೆರಿಕಾ ಟೆನಿಸ್ ತಾರೆ, ಇದೀಗ ಭಾರತೀಯರ ಮನಸ್ಸು ಗೆದ್ದಿದ್ದಾರೆ.
ನ್ಯೂಯಾರ್ಕ್(ಜು.22): ಅಮೇರಿಕಾ ಟೆನಿಸ್ ಆಟಗಾರ್ತಿ ಅಲಿಸ್ಸನ್ ರಿಸ್ಕೆ ಇತ್ತೀಚೆಗೆ ಮುಕ್ತಾಯವಾದ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು. ವಿಂಬಲ್ಡನ್ ಟೂರ್ನಿ ಮುಗಿದ ಬೆನ್ನಲ್ಲೇ ಅಲಿಸ್ಸನ್, ಭಾರತೀಯ ಮೂಲದ ಅಮೇರಿಕಾ ಟೆನಿಸ್ ಪಟ ಸ್ಟೀಫನ್ ಅಮೃತ್‌ರಾಜ್ ವಿವಾಹವಾಗಿದ್ದಾರೆ. ಮದುವೆ ಸಮಾರಂಭದಲ್ಲಿ ಅಲಿಸ್ಸನ್ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ.
officially an Amritraj! I’m the luckiest lady because of ! where all my new Indian followers at??!! here’s a little Bollywood to try to win over your affection! 🤣💞🥂 pic.twitter.com/ejX29aT5cF
— Alison Riske (@Riske4rewards)ಅಲಿಸ್ಸನ್ ರಿಸ್ಕೆ ಬಾರ್ ಬಾರ್ ದೇಖೋ ಬಾಲಿವುಡ್ ಚಿತ್ರದ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ವಿಶ್ವದ 37ನೇ ಶ್ರೇಯಾಂಕಿತ ಅಲಿಸ್ಸನ್ ರಿಸ್ಕೆ ಬಾಲಿವುಡ್ ಡ್ಯಾನ್ಸ್‌ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಅಲಿಸ್ಸನ್ ಡ್ಯಾನ್ಸ್‌ಗೆ ಶಹಬ್ಬಾಷ್ ಎಂದಿದ್ದಾರೆ.
Yay!! Congratulations.. to you and ❤️ those moves btw 👏🏽👏🏽 https://t.co/VXUJeetN4J
— Sania Mirza (@MirzaSania)