ವಿಶ್ವಕಪ್ ನೇರ ಪ್ರವೇಶಕ್ಕೆ ವಿಂಡಿಸ್ ಕಸರತ್ತು

By Suvarna Web DeskFirst Published Sep 13, 2017, 2:10 PM IST
Highlights

ಐರ್ಲೆಂಡ್ ವಿರುದ್ಧದ ಏಕೈಕ ಪಂದ್ಯ ಗೆದ್ದರಷ್ಟೇ ಸಾಲದು, ಇನ್ನು ಇಂಗ್ಲೆಂಡ್ ವಿರುದ್ಧ 4-1 ಅಂತರದಲ್ಲಿ ಸರಣಿ ಗೆದ್ದರಷ್ಟೇ ವೆಸ್ಟ್ ಇಂಡಿಸ್ ತಂಡ 2019ರ ಏಕದಿನ ವಿಶ್ವಕಪ್'ಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.

ಲಂಡನ್(ಸೆ.13): ಒಂದು ಕಾಲ ಇಡೀ ಕ್ರಿಕೆಟ್ ಜಗತ್ತನ್ನು ಆಳಿದ್ದ ಎರಡು ಬಾರಿಯ ವಿಶ್ವಚಾಂಪಿಯನ್ ವೆಸ್ಟ್ ಇಂಡಿಸ್, ಇದೀಗ 2019ರ ಏಕದಿನ ವಿಶ್ವಕಪ್ ನೇರ ಪ್ರವೇಶಕ್ಕೆ ಹೆಣಗಾಡುತ್ತಿದೆ.

ಪ್ರಸ್ತುತ 9ನೇ ಶ್ರೇಯಾಂಕದಲ್ಲಿರುವ ವೆಸ್ಟ್ ಇಂಡಿಸ್ ತಂಡ ಐರ್ಲೆಂಡ್ ವಿರುದ್ಧದ ಏಕೈಕ ಪಂದ್ಯದಲ್ಲಿ ಹಾಗೂ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ವಿಂಡೀಸ್ ಮಂಡಳಿ ಸ್ಫೋಟಕ ಆಟಗಾರರಾದ ಕ್ರಿಸ್ ಗೇಲ್, ಮರ್ಲಾನ್ ಸ್ಯಾಮ್ಯುಯಲ್ಸ್ ಹಾಗೂ ಜೇರೋಮ್ ಟೇಲರ್'ಗೆ ತಂಡದಲ್ಲಿ ಅವಕಾಶ ಕಲ್ಪಿಸಿಕೊಳ್ಳಲಾಗಿದೆ.

ಐರ್ಲೆಂಡ್ ವಿರುದ್ಧದ ಏಕೈಕ ಪಂದ್ಯ ಗೆದ್ದರಷ್ಟೇ ಸಾಲದು, ಇನ್ನು ಇಂಗ್ಲೆಂಡ್ ವಿರುದ್ಧ 4-1 ಅಂತರದಲ್ಲಿ ಸರಣಿ ಗೆದ್ದರಷ್ಟೇ ವೆಸ್ಟ್ ಇಂಡಿಸ್ ತಂಡ 2019ರ ಏಕದಿನ ವಿಶ್ವಕಪ್'ಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.

ವಿಚಿತ್ರವೆಂದರೆ 2015ರ ಏಕದಿನ ವಿಶ್ವಕಪ್ ಬಳಿಕ ಕ್ರಿಸ್ ಗೇಲ್ ರಾಷ್ಟ್ರೀಯ ಏಕದಿನ ತಂಡದಿಂದ ಕೈಬಿಡಲಾಗಿತ್ತು. ಆದರೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯವಿರುವ ಗೇಲ್ ಅವಶ್ಯಕತೆಯನ್ನು ಮನಗಂಡಿರುವ ವಿಂಡಿಸ್ ಕ್ರಿಕೆಟ್ ಮಂಡಳಿ ಗೇಲ್ ಅವರನ್ನು ತಂಡಕ್ಕೆ ವಾಪಾಸ್ ಕರೆಸಿಕೊಂಡಿದೆ. ಅಲ್ಲದೇ ಅನುಭವಿ ಆಲ್ರೌಂಡರ್ ಮರ್ಲಾನ್ ಸ್ಯಾಮ್ಯುಯಲ್ಸ್, ವೇಗಿ ಜೇರೋಮ್ ಟೇಲರ್'ಗೂ ತಂಡದಲ್ಲಿ ಮಣೆ ಹಾಕಿದೆ.

click me!